ಬ್ಯಾಡಗಿ: ಪುರಸಭೆ ವ್ಯಾಪ್ತಿಯಲ್ಲಿ ಮಾದರಿ ಉದ್ಯಾನ ನಿರ್ವಿುಸಲು ಬಜೆಟ್ನಲ್ಲಿ ಅನುದಾನ ಮೀಸಲಿಡುವ ಮೂಲಕ ವಾರ್ಡ್ಗಳಲ್ಲಿ ಉದ್ಯಾನಗಳ ರಕ್ಷಣಾ ಸಮಿತಿ ರಚಿಸುವ ಮೂಲಕ ಪರಿಸರ ಹಾಗೂ ಗಿಡಮರಗಳನ್ನು ಕಾಪಾಡುವಂತೆ ಆಗ್ರಹಿಸಿ ಪರಿಸರಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಹುಲ್ಲತ್ತಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೌಡ ಅವರಿಗೆ ಮನವಿ ಸಲ್ಲಿಸಿದರು
ಬಳಿಕ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್ಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಉದ್ಯಾನಗಳಿದ್ದು, ಎಲ್ಲವೂ ಸಮರ್ಪಕವಾಗಿ ಅಭಿವೃದ್ಧಿ ಕಂಡಿಲ್ಲ. ಪ್ರತಿ ಬಾರಿ ಬಜೆಟ್ನಲ್ಲಿ ಲಕ್ಷಾಂತರ ರೂ. ಮೀಸಲಿಟ್ಟು ಬಳಕೆ ಮಾಡಲಾಗುತ್ತಿದ್ದು, ಎಲ್ಲ ಉದ್ಯಾನಗಳಿಗೆ ಅಲ್ಪಸ್ವಲ್ಪ ಅನುದಾನ ಖರ್ಚು ಮಾಡುವ ಬದಲಾಗಿ, ಪ್ರತಿವರ್ಷವೂ ಎರಡೂ ಉದ್ಯಾನ ಆಯ್ಕೆ ಮಾಡಿಕೊಂಡು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.