ಸವಣೂರ: ನೈಜ ಫಲಾನುಭವಿ ಕಟ್ಟಡ ಕಾರ್ವಿುಕರಿಗೆ ಮಾತ್ರ ಕಾರ್ಡ್ ಅನುಮೋದನೆ ನೀಡಬೇಕು ಹಾಗೂ ನಕಲಿ ಫಲಾನುಭವಿ ಕಾರ್ವಿುಕರ ಕಾರ್ಡ್ಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರ ನಿರ್ಮಾಣ ಕಾರ್ವಿುಕರ ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳು ಪಟ್ಟಣದ ಕಾರ್ವಿುಕ ಇಲಾಖೆ ಕಚೇರಿ ಎದುರು ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಕಾರ್ವಿುಕ ನಿರೀಕ್ಷಕಿ ಅನುರಾಧಾ ಜಿ.ಕೆ., ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ನೈಜವಾಗಿ ಕಟ್ಟಡ ಮತ್ತು ಇತರ ನಿರ್ಮಾಣ ರಂಗದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ನೈಜ ಕಾರ್ವಿುಕರಿಗೆ ಇಲಾಖೆಯಿಂದ ಕಾರ್ವಿುಕರ ಕಾರ್ಡ್ಗೆ ಅನುಮೋದನೆ ನೀಡದೇ, ಸರ್ಕಾರದ ಸೌಲಭ್ಯವನ್ನು ನೀಡದೇ ನಿರಂತರ ಅನ್ಯಾಯವಾಗುತ್ತಿದೆ. ಈ ಕುರಿತು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಅರ್ಹ ನೈಜ ಕಾರ್ವಿುಕರ ಕಾರ್ಡ್ಗಳಿಗೆ ಕೂಡಲೇ ಅನುಮೋದನೆ ನೀಡಿ, ಸೌಲಭ್ಯ ಒದಗಿಸಬೇಕು.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡದೇ ಇರುವ ಕೆಲವರು ರಾಜಕೀಯ ಹಾಗೂ ಇತರ ಪ್ರೇರಣೆಯಿಂದ ಕಾರ್ವಿುಕರ ಕಾರ್ಡ್ಗಳೊಂದಿಗೆ ಸರ್ಕಾರದ ಸೌಲಭ್ಯ ಪಡೆದುಕೊಂಡಿದ್ದಾರೆ. ಇದರಿಂದ, ನೈಜ ಕಾರ್ವಿುಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಅಂತಹ ಕಾರ್ಡ್ಗಳನ್ನು ಕೂಡಲೇ ರದ್ದು ಪಡಿಸಬೇಕು. ಈ ಕುರಿತು ನ. 11ರ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ವಿುಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಲಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಿಡಬ್ಲ್ಯೂಎಫ್ಐ ಸಂಘಟನೆ ಪದಾಧಿಕಾರಿಗಳಾದ ಚನ್ನವೀರಯ್ಯ ಹಿರೇಮಠ, ರಿಯಾಜ್ಅಹ್ಮದ ಮರಪಾಜಿ, ಎಂ.ಸಿ. ನೆಗಳೂರ, ಖಲಂದರ ಶಿಗ್ಗಾಂವಿ, ವಿರೂಪಾಕ್ಷಪ್ಪ ಕೆಂಚಣ್ಣನವರ, ರಿಯಾಜ್ಅಹ್ಮದ ಕೋಟೆನವರ ಇತರರಿದ್ದರು.