ಜಿಲ್ಲೆ

ಎಂಇಎಸ್ ನಿಷೇಧಿಸಲು ಆಗ್ರಹ

ಜಗದೀಶ ಹೊಂಬಳಿ

ಬೆಳಗಾವಿ: ಚಳಿಗಾಲ ಅಧಿವೇಶದ ವೇಳೆ ನಗರದಲ್ಲಿ ಮಹಾಮೇಳಾವ ನಡೆಸಲು ಉದ್ದೇಶಿಸಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣದ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕುಂದಾನಗರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ವೇಳೆ ಕರಾಳ ದಿನ ಆಚರಣೆ ಮಾಡಿ ಎಂಇಎಸ್ ನಾಡ ವಿರೋಧಿ ನಿಲುವು ಪ್ರದರ್ಶಿಸಿತ್ತು, ಈಗ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಮಹಾಮೇಳವ ನಡೆಸಲು ಷಡ್ಯಂತ್ರ ರೂಪಿಸಿ, ಕನ್ನಡಿಗರ ಭಾವನೆಗೆ ಧಕ್ಕೆ ತರಲು ಮುಂದಾಗಿದೆ. ಆದ್ದರಿಂದ ನಾಡದ್ರೋಹಿ ಎಂಇಎಸ್ ಸಂಘಟನೆ ಕೂಡಲೇ ನಿಷೇಧಿಸಿ,ಕರಾಳ ದಿನಾಚರಣೆಯಲ್ಲಿ ಭಾಗಿಯಾದ ಮುಖಂಡರನ್ನು ಗಡಿಪಾರು ಮಾಡುವಂತೆ ಮನವಿ ಮೂಲಕ ಒತ್ತಾಯಿಸಿದರು.

ವಾಜೀದ್ ಹಿರೇಕುಡಿ, ಮಹಾಂತೇಶ ರಣಗಟ್ಟಿಮಠ, ಸಲೀಂ ಕಾಲೇಖಾನ್, ಯುನುಸ್ ಹಿರೇಕುಡಿ, ಕರುಣಾಕರ ಶೆಟ್ಟಿ, ಅನ್ನಪೂರ್ಣಾ ಅಸೂರಕರ, ಸಂಗೀತ ಕಾಂಬಳೆ ಇತರರಿದ್ದರು.