ಜಿಲ್ಲೆ

ಸೌಜನ್ಯ ಕೊಲೆ ಅಪರಾಧಿಗಳನ್ನು ಬಂಧಿಸಿ: ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ 13 ವರ್ಷ ಕಳೆದರೂ ಅಪರಾಧಿಗಳನ್ನು ಪತ್ತೆ ಮಾಡಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಪತ್ತೆ ಮಾಡಬೇಕೆಂದು ಒತ್ತಾಯಿಸಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ನೀಡಿದರು.

ಮುಖ್ಯಮಂತ್ರಿಗಳು ಗಂಭೀರವಾಗಿ ನಮ್ಮ ಮನವಿಯನ್ನು ಪರಿಗಣಿಸಬೇಕು. ಧರ್ಮಸ್ಥಳ ಕೂಡ ನಮ್ಮ ರಾಜ್ಯದ ಒಳಗಿನ ಗ್ರಾಮವಾಗಿದೆ. ನಮ್ಮ ಸಂವಿಧಾನ ರಚನೆಯ ಎಲ್ಲ ಶಾಸನಗಳು ಅಲ್ಲಿಗೂ ಕೂಡ ಅನ್ವಯವಾಗುತ್ತದೆ. ನೈಜ ಪ್ರಜಾಪ್ರಭುತ್ವದಲ್ಲೂ ಎನ್ನುವುದನ್ನು ಅಲ್ಲಿ ಮರೆಯಬಾರದು ಎಂದು ಒತ್ತಾಯಿಸಿದರು.

ಸೌಜನ್ಯ ಅತ್ಯಾಚಾರ ಹತ್ಯೆಯ ನೈಜ ಅಪರಾಧಿಗಳನ್ನು ಬಂಧಿಸಬೇಕು. ಧರ್ಮಸ್ಥಳದ ಎಲ್ಲ ಅಸಹಜ ಸಾವುಗಳ ತನಿಖೆ ನಡೆಸಬೇಕು. ಎಸ್‌ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಹಲ್ಲೇಗೆರೆ ಶಿವರಾಮು, ಜವರೇಗೌಡ, ಸುರೇಶ್, ಎಂ.ಕುಮಾರ್, ಬಿಳೀಗೌಡ, ರಾಮೇಗೌಡ ಭಾಗವಹಿಸಿದ್ದರು.