ಬಾಗಲಕೋಟೆ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಉನ್ನತ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಹ ಸಂಚಾಲಕ ಶ್ರೇಯಸ್ ಶೆಟ್ಟಿ, ಕಾರ್ಯಕರ್ತರಾದ ಸುಹಾಸ ಬಡಿಗೇರ, ಮಹೇಶ ಕರಕದಾರ, ಹರ್ಷ ಚಂಡಕ, ಧೀರಜ ವರ್ಣೇಕರ ಇದ್ದರು. 
ಜಿಲ್ಲೆ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ಗಿರೀಶ ಸಗರ

ಬಾಗಲಕೋಟೆ: ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಶೌಚಗೃಹ ವಿಡಿಯೋ ಚಿತ್ರೀಕರಣ ಮಾಡಿದ 3 ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ವಿದ್ಯಾರ್ಥಿ, ಕಠಿಣ, ಆಗ್ರಹ, ಬಾಗಲಕೋಟೆ, ಪ್ರತಿಭಟನೆ, ನಡೆಸಲಾಯಿತು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಉನ್ನತ ಬೇವಿನಕಟ್ಟಿ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಕೆಲ ಯುವತಿಯರು ಶೌಚಗೃಹ ಬಳಸುವ ವಿಡಿಯೋವನ್ನು 3 ಯುವತಿಯರು ಮಾಡಿ ಅದನ್ನು ಅನ್ಯ ಕೋಮಿನವರೊಂದಿಗೆ ಹಂಚಿಕೊಂಡಿರುವ ಆತಂಕಕಾರಿ ಘಟನೆಯಾಗಿದೆ.

ಈ ಕುರಿತು ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆಯ ಸೂಕ್ಷ್ಮತೆ ಮತ್ತು ಗಂಭೀರತೆ ಗಮನಿಸಿ ಇಂತಹ ಘಟನೆ ಇತರ ಕಾಲೇಜಿನಲ್ಲಿ ಮರುಕಳಿಸದಂತೆ ಜಿಲ್ಲೆಯ ಪ್ರತಿ ಕಾಲೇಜಿನಲ್ಲೂ ಅರಿವು ಮೂಡಿಸಬೇಕು. ರಾಜ್ಯ ಸರ್ಕಾರ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಹ ಸಂಚಾಲಕ ಶ್ರೇಯಸ್ ಶೆಟ್ಟಿ, ಕಾರ್ಯಕರ್ತರಾದ ಸುಹಾಸ ಬಡಿಗೇರ, ಮಹೇಶ ಕರಕದಾರ, ಹರ್ಷ ಚಂಡಕ, ಧೀರಜ ವರ್ಣೇಕರ, ಬಸಯ್ಯ ಉಪಸ್ಥಿತರಿದ್ದರು.