ಜಿಲ್ಲೆ

ಶಾಲೆ ಆರಂಭಿಸುವ ಮುನ್ನ ಬೇಡಿಕೆ ಈಡೇರಿಕೆಗೆ ಪಟ್ಟು: ನಾಳೆಯಿಂದ ಆನ್​ಲೈನ್ ಕ್ಲಾಸ್ ಬಂದ್

ಬೆಂಗಳೂರು: ಶಾಲೆ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿರುವ ಮಧ್ಯೆಯೇ ಖಾಸಗಿ ಶಾಲೆಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿವೆ.

ರಾಜ್ಯ ಸರ್ಕಾರ ಜ.1ರಿಂದ 10 ಮತ್ತು ದ್ವಿತೀಯ ಪಿಯು ಶಾಲೆಗಳನ್ನು ಆರಂಭಿಸುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಖಾಸಗಿ ಶಾಲೆಗಳು ತಮ್ಮ ಬೇಡಿಕೆ ಈಡೇರಿಸಿದ ಬಳಿಕ ಪ್ರಾರಂಭ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿವೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಡಿ.20ರ ನಂತರ ಆನ್​ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸಾ) ಘೋಷಿಸಿದೆ.

ಆದರೆ, ನಾವು ಯಾವುದೇ ಆನ್​ಲೈನ್ ಕ್ಲಾಸ್ ಬಂದ್ ಮಾಡುವುದಿಲ್ಲ. ಬದಲಾಗಿ ಶಾಲೆ ಆರಂಭಿಸುವ ಮುನ್ನ ರಾಜ್ಯ ಸರ್ಕಾರ ವಿದ್ಯಾಗಮ, ಶಾಲೆ ಹಾಗೂ ಖಾಸಗಿ ಶಾಲೆ ಗಳೆಂಬಂತೆ ಪ್ರತ್ಯೇಕ ಪ್ರಮಾಣಿತ ಕಾರ್ಯಚರಣಾ ವಿಧಾನ (ಎಸ್​ಒಪಿ) ಹೊರಡಿಸಬೇಕು. ಶಿಕ್ಷಕರು ಕರೊನಾಗೆ ತುತ್ತಾ ದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಸಂಘಟನೆ ಒತ್ತಾಯಿಸಿದೆ. ಈಗಾಗಲೇ ಎರಡೂ ಸಂಘಟನೆಗಳು ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆದಿವೆ. ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಪಾಲಕರ ವಾದ: ಸರ್ಕಾರ ಮೊದಲ ಕಂತಿನ ಶುಲ್ಕ ಪಾವತಿಗೆ ಮಾತ್ರ ಅವಕಾಶ ನೀಡಿದೆ. ಆದರೆ, ಬಲವಂತವಾಗಿ ಶುಲ್ಕ ವಸೂಲಿ ಮಾಡದಂತೆ ಹೇಳಿದೆ. ಕರೊನಾ ಸಂಕಷ್ಟದ ಸ್ಥಿತಿಯಲ್ಲೂ ನಾವು ಮೊದಲ ಕಂತು ಪಾವತಿಸಿದ್ದೇವೆ. ಈಗ ಶಾಲೆಗಳು ಎರಡನೇ ಕಂತು ಪಾವತಿಗೆ ಒತ್ತಡ ಹಾಕುತ್ತಿವೆ. ಆನ್​ಲೈನ್ ಶಿಕ್ಷಣ ನಿಲ್ಲಿಸುವ ಬೆದರಿಕೆ ಮುಂದುವರಿಸಿವೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಡಿ.20ರ ನಂತರ ಆನ್​ಲೈನ್, ಭೌತಿಕ ತರಗತಿ ಸ್ಥಗಿತಗೊಳಿಸುವ ಜತೆಗೆ ಶೈಕ್ಷಣಿಕ ಚಟು ವಟಿಕೆ ರದ್ದುಗೊಳಿಸುತ್ತವೆ ಎಂಬುದು ಸುಳ್ಳು. ಬಂದ್​ಗೆ ಕರೆ ನೀಡಿಲ್ಲ. |ಡಿ.ಶಶಿಕುಮಾರ್ ಕ್ಯಾಮ್್ಸ ನ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಎಲ್ಲ ತಾಲೂಕು ಹಾಗೂ ಜಿಲ್ಲೆಯಲ್ಲಿ ಡಿ.20ರಂದು ಸಭೆ ನಡೆಸುತ್ತೇವೆ. ಆ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಅಂತಿಮಗೊಳಿಸಿ, ಜ.6ರಂದು ಬೃಹತ್ ಹೋರಾಟ ನಡೆಸಲಿದ್ದೇವೆ. ಡಿ.20ರಿಂದ ಆನ್​ಲೈನ್ ತರಗತಿ ಇರುವುದಿಲ್ಲ. |ಲೋಕೇಶ್ ತಾಳಿಕೋಟೆ ರುಪ್ಸಾ ಸಂಘಟನೆ ಅಧ್ಯಕ್ಷ

ಕ್ಯಾಮ್್ಸ ಬೇಡಿಕೆಗಳು

  • ಖಾಸಗಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಯನ್ನು ಕರೊನಾ ಯೋಧರೆಂದು ಪರಿಗಣಿಸಿ ಕೋವಿಡ್ ಲಸಿಕೆ ಉಚಿತ ನೀಡಿಕೆ
  • ಸುರಕ್ಷತಾ ಉಪಕರಣ ಖರೀದಿಗೆ ರಿಯಾಯಿತಿ
  • ಕೋವಿಡ್ ಮುಗಿಯುವರೆಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗೆ ಸರ್ಕಾರದಿಂದ ಗೌರವ ಧನ ಹಾಗೂ ಆಹಾರ ಕಿಟ್ ನೀಡಿ
  • ಶಿಕ್ಷಕರಿಗೆ ಸರ್ಕಾರದಿಂದ ಪ್ರತ್ಯೇಕ ವಿಮೆ ಸೌಲಭ್ಯ
  • ಶಿಕ್ಷಣ ಸಂಸ್ಥೆಗಳ ಪುನಾರಾರಂಭಕ್ಕೆ ಕ್ರಮ

ರುಪ್ಸಾ ಬೇಡಿಕೆಗಳು

  • ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ನಿಯಮಗಳನ್ನು ಹಿಂಪಡೆಯಬೇಕು
  • ಆರ್​ಟಿಇ ಶುಲ್ಕ ಮರುಪಾವತಿಗೆ ಆಡಿಟ್ ವರದಿ ಕೇಳಿರುವುದನ್ನು ಕೈ ಬಿಡಬೇಕು
  • ಶಿಕ್ಷಕರಿಗೆ ಕನಿಷ್ಠ ಪ್ಯಾಕೇಜ್ ಘೋಷಣೆ ಮಾಡಬೇಕು.