ಜಿಲ್ಲೆ

ಬಸ್ ಪ್ರಯಾಣದರ ಹೆಚ್ಚಳ ಆದೇಶ ಹಿಂಪಡೆಯಲು ಆಗ್ರಹ

ರಟ್ಟಿಹಳ್ಳಿ: ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ರೈತ ಸಂಘದಿಂದ ಸಾರಿಗೆ ನಿಯಂತ್ರಕ ಎಂ.ಬಿ. ಬಣಕಾರ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಸರ್ಕಾರ ಕೂಡಲೇ ಬಸ್ ದರ ಏರಿಕೆ ಆದೇಶ ಹಿಂಪಡೆಯಬೇಕು. ಹಾವೇರಿ ಜಿಲ್ಲಾ ಕೇಂದ್ರದಿಂದ ಬ್ಯಾಡಗಿ, ತಿಮ್ಮಾಪುರ ಕ್ರಾಸ್, ಹುಲ್ಲತ್ತಿ, ಚಿಕ್ಕಯಡಚಿ, ರಟ್ಟಿಹಳ್ಳಿ ಮಾರ್ಗವಾಗಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ನೂತನ ಬಸ್ ಓಡಿಸಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜ. 17ರಂದು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರವಿ ಮಾಳಗೇರ, ಡಾ.ಜಿ.ಎಂ. ಬಸವರಾಜ, ಪೂಜಾ ಮ್ಯಾಚೇರ, ಗೀತಾ ಅಂಗಡಿ, ಗುರುರಾಜ ಕಡೇಮನಿ, ಶಂಕ್ರಪ್ಪ ತಳವಾರ, ಸಿದ್ದಪ್ಪ ಮಡಿವಾಳರ, ಚಂದ್ರಯ್ಯ ಹಿರೇಮಠ ಇತರರು ಇದ್ದರು.