ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂದ ಜಿಲ್ಲಾ ಟಕದ ವತಿಯಿಂದ ಜಿ.ಪಂ. ಉಪ ಕಾರ್ಯನಿರ್ವಾಹಕ ವಿಜಯಕುಮಾರ ಆಜೂರ ಅವರಿಗೆ ಮನವಿ ಸಲ್ಲಿಸಲಾಯಿತು. ಅರುಣ ಶಹಾಪೂರ, ಎ.ಎಸ್​. ಬಿರಾದಾರ, ವೈ.ಎಂ. ಪ್ರಧಾನಿ ಮತ್ತಿತರರಿದ್ದಾರೆ. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಗಿರೀಶ ಸಗರ

ವಿಜಯಪುರ: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ (ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ) ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂದ ಜಿಲ್ಲಾ ಟಕದ ವತಿಯಿಂದ ಸೋಮವಾರ ಜಿಪಂ ಉಪ ಕಾರ್ಯನಿರ್ವಾಹಕ ವಿಜಯಕುಮಾರ ಆಜೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವಿವಿಧ ಬೇಡಿಕೆಗಳಾದ ಕಖ ರದ್ದುಪಡಿಸಿ ಣಕಖ ಜಾರಿ, ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಏಪ್ರಿಲ್​/ ಮೇ ತಿಂಗಳನಲ್ಲಿ ಜಾರಿಗೊಳಿಸುವುದು, ನಿಯಮಿತವಾಗಿ ಸರಕಾರಿ ಹಾಗೂ ಸಾಮಾನ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ವೇತನವನ್ನು ಮಾಡುವುದು, 7ನೇ ವೇತನ ಆಯೋಗ ಜಾರಿಗೊಳಿಸುವುದು, ಪ್ರತಿವರ್ಷ ನಿಯಮಿತವಾಗಿ ಪ್ರೌಢಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯರ ಹುದ್ದೆಗೆ ಮುಂಬಡ್ತಿ ನೀಡುವುದು, ಜ್ಯೋತಿ ಸಂಜೀವಿನಿ ಸ್ಕಿಮ್​ನ್ನು ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಸ್ತರಿಸುವುದು, ಪ್ರೌಢಶಾಲಾ ಶಿಕ್ಷಕರನ್ನು ಪದವಿ ಪೂರ್ವ ಕಾಲೇಜುಗಳಿಗೆ ಮುಂಬಡ್ತಿ ನೀಡುವುದು ಸೇರಿ ಮತ್ತಿತರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ಎ.ಎಸ್​. ಬಿರಾದಾರ, ವೈ.ಎಂ. ಪ್ರಧಾನಿ, ಜಿ.ಎಸ್​. ಸಾವಳಗಿ, ಎಸ್​.ಜಿ. ಹಂಚನಾಳ, ಎಸ್​.ಬಿ. ಜೋಶಿ ಮತ್ತಿತರರಿದ್ದರು.