ಬೆಳಗಾವಿ: ರೈತರಿಗೆ ಸರ್ಕಾರ ಸರಿಯಾಗಿ ಯೂರಿಯಾ ಗೊಬ್ಬರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಟನೆ ಹಾಗೂ ಹಸಿರು ಸೇನೆ ತಾಲೂಕು ಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು.
ಮುಂಗಾರು ಬಿತ್ತನೆ ಪೂರ್ವದಲ್ಲಿಯೇ ಮಳೆ ಹೆಚ್ಚಾಗಿದ್ದರಿಂದ ಬಿತ್ತನೆ ಮತ್ತಿತರ ಕೃಷಿ ಕಾರ್ಯ ಸರಿಯಾಗಿ ನಡೆದಿರಲಿಲ್ಲ. ತಡವಾಗಿಯಾದರೂ ಈಗ ಬೆಳೆಗಳು ರೈತರ ಕೈ ಹಿಡಿದಿವೆ. ಈಗ ಬೆಳೆಗೆ ಅಗತ್ಯವಾಗಿ ಬೇಕಾದ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದರಿಂದ ಬೆಳೆ ನಷ್ಟವಾಗುವ ಆತಂಕ ಸೃಷ್ಟಿಯಾಗಿದ್ದು, ಆದಷ್ಟು ಬೇಗ ರಸಗೊಬ್ಬರ ಅಭಾವ ನಿವಾರಿಸಬೇಕು ಎಂದು ಆಗ್ರಹಿಸಿದರು.
ಕೆಲ ಕೃಷಿ ಸೊಸೈಟಿಗಳಲ್ಲಿ ರಸಗೊಬ್ಬರ ಲಭ್ಯವಿದ್ದರೂ ಗೊಬ್ಬರದ ಜತೆಗೆ ಇತರ ಕೃಷಿ ಸಂಬಂಧಿ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವಶ್ಯ ಇಲ್ಲದಿದ್ದರೂ ಅವುಗಳನ್ನು ಖರೀದಿಸುವ ಸ್ಥಿತಿ ಎದುರಾಗಿದೆ. ಅಂತಹ ಸೊಸೈಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಟನೆ ತಾಲೂಕು ಅಧ್ಯಕ್ಷ ರಾಜು ಮರ್ವೆ, ನಿತಿನ ಕನ್ನೂಕರ, ಹನುಮಂತ ಬಾಳೇಕುಂದ್ರಿ, ಮಹೇಶ ಚತುರ, ಕಿರಣ ಸಾಂಬ್ರೇಕರ ಹಾಗೂ ಇತರರಿದ್ದರು.