ಕೋಲಾರದ ಶ್ರೀದೇವರಾಜ ಅರಸು ನರ್ಸಿಂಗ್​ ಕಾಲೇಜಿನ ಪದವಿ ಪ್ರದಾನ ಸಮಾರಂಭವನ್ನು ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟಾರ್​ ಡಾ.ಶ್ರೀಕಾಂತ್​ ಫುಲಾರಿ ಉದ್ಘಾಟಿಸಿದರು. ಡಾ.ವಿ.ಎಲ್​.ಎನ್​.ಪ್ರಸಾದ್​, ಡಾ.ವಿಜಯಲಕ್ಷ್ಮೀ ಡಾ.ಸಿ.ಮುನಿನಾರಾಯಣ, ಡಾ.ಕೆ.ಪ್ರಭಾಕರ್​, ಡಾ.ಜೆ.ಕೃಷ್ಣಪ್ಪ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್​, ನರ್ಸಿಂಗ್​ ಕಾಲೇಜಿನ ಪ್ರಾಂಶುಪಾಲೆ ಡಾ.ವಿಜಯಲಕ್ಷ್ಮೀ ಇದ್ದರು. 
ಜಿಲ್ಲೆ

ಜಾಗತಿಕಮಟ್ಟದಲ್ಲಿ ನರ್ಸಿಂಗ್​ ವೃತ್ತಿಗೆ ಬೇಡಿಕೆ ಹೆಚ್ಚಳ

ಕೋಲಾರ ಡೆಸ್ಕ್

ರಾಜೀವ್​ ಗಾಂಧಿ ಆರೋಗ್ಯ ವಿವಿಯ ಸಹಾಯಕ ರಿಜಿಸ್ಟ್ರಾರ್​ ಡಾ.ಶ್ರೀಕಾಂತ್​ ಫುಲಾರಿ ಅನಿಸಿಕೆ - ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕೋಲಾರ: ನರ್ಸಿಂಗ್​ ವಿಶ್ವಮಾನ್ಯ ವೃತ್ತಿಯಾಗಿದ್ದು, ಜಾಗತಿಕ ನರ್ಸಿಂಗ್​ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ರಾಜೀವ್​ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್​ ಡಾ.ಶ್ರೀಕಾಂತ್​ ಫುಲಾರಿ ಹೇಳಿದರು.

ನಗರದ ಶ್ರೀದೇವರಾಜ ಅರಸು ನರ್ಸಿಂಗ್​ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ವ್ಯಾಸಂಗ ಮಾಡಿರುವ ನರ್ಸಿಂಗ್​ ವಿದ್ಯಾರ್ಥಿಗಳಿಗೆ ಜರ್ಮನ್​ ಸೇರಿ ಆರು ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಇದ್ದು, ಆ ರಾಷ್ಟ್ರಗಳ ಸಚಿವರೊಂದಿಗೆ ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಜರ್ಮನಿ ಭಾಷೆಯನ್ನು ಕಲಿತುಕೊಂಡರೆ

ನರ್ಸ್​ಗಳು 2.50 ಲಕ್ಷ ರೂಪಾಯಿ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಕರ್ನಾಟಕದ ನರ್ಸಿಂಗ್​ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.

ನರ್ಸ್​ಗಳು ಹಿಂದೆ ಪ್ರತಿಯೊಂದು ಕೋರ್ಸಿಗೂ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಿತ್ತು, ಆದರೆ, ಇನ್ನು ಮುಂದೆ ಒಂದೇ ನೋಂದಣಿ ಸಂಖ್ಯೆಯಡಿಯೇ ಹೊಸ ಕೋರ್ಸುಗಳನ್ನು ಜೋಡಿಸಿಕೊಂಡು ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಜಗತ್ತನ್ನು ಆತ್ಮವಿಶ್ವಾಸದಿಂದ ಎದುರಿಸುವ ನಿಟ್ಟಿನಲ್ಲಿ ಅರಸು ನರ್ಸಿಂಗ್​ ಕಾಲೇಜು ಶೈಕ್ಷಣಿಕವಾಗಿ ಎಲ್ಲ ಸಾಧ್ಯತೆಗಳನ್ನು ಪೂರೈಸುತ್ತಿದೆ. ಶೇ.100 ವೃತ್ತಿ ಖಾತ್ರಿ ಒದಗಿಸುವ ಕೋರ್ಸ್​ ಆಗಿದೆ. ಕೋವಿಡ್​ ಸಂದರ್ಭದಲ್ಲಿ ನರ್ಸಿಂಗ್​ ವೃತ್ತಿಯ ಮಹತ್ವದ ಬಗ್ಗೆ ಜಗತ್ತಿಗೆ ಅರಿವಾಯಿತು. ಮನುಕುಲ ಇರುವವರೆವಿಗೂ ನರ್ಸಿಂಗ್​ ಕೇರ್​ ಇದ್ದೇ ಇರುತ್ತದೆ, ರೋಗಿಗಳೇ ದೇವರು ಎಂಬ ಭಾವನೆಯಲ್ಲಿ ಫ್ಲೋರೇನ್ಸ್​ ನೈಟಿಂಗೇಲ್​ರ ಪ್ರಮಾಣವನ್ನು ವೃತ್ತಿ ಜೀವನದುದ್ದಕ್ಕೂ ಅನುಸರಿಸಬೇಕು ಎಂದು ಸಲಹೆ ನೀಡಿದರು.

ದೇವರಾಜ ಅರಸು ವೈದ್ಯಕಿಯ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್​.ಎನ್​.ಪ್ರಸಾದ್​ ಮಾತನಾಡಿ, ಬದ್ಧತೆಯ ವೃತ್ತಿಗೆ ನಿರಂತರ ಕಲಿಕೆ ಪೂರಕವಾಗಿದೆ. ಪದವೀಧರರು ಜವಾಬ್ದಾರಿಯಿಂದ ವೃತ್ತಿಯನ್ನು ನಿಭಾಯಿಸಬೇಕು, ಅವಕಾಶವನ್ನು ಅನುಭವವಾಗಿ ಸ್ಪೀಕರಿಸಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಉಪ ಕುಲಪತಿ ಡಾ.ಬಿ.ವೆಂಗಮ್ಮ ಮಾತನಾಡಿ, ವೈದ್ಯರು ದೇಹದ ಒಂದೊಂದೇ ಭಾಗದ ಚಿಕಿತ್ಸೆಗೆ ಪರಿಣಿತಿ ಪಡೆದುಕೊಂಡಿರುತ್ತಾರೆ, ಆದರೆ, ನರ್ಸ್​ಗಳು ಇಡೀ ಮಾನವನ ದೇಹದ ವೈದ್ಯಕಿಯ ಆರೈಕೆ ಮಾಡುವ ಕೌಶಲ ಹೊಂದಿರುತ್ತಾರೆಂದು ಬಣ್ಣಿಸಿದರು.

ಅರಸು ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿ ಮೃಣಾಳಿನಿ, ರಿಜಿಸ್ಟ್ರಾರ್​ ಡಾ.ಸಿ.ಮುನಿನಾರಾಯಣ, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್​, ವೈದ್ಯಕಿಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ನರ್ಸಿಂಗ್​ ಕಾಲೇಜಿನ ಪ್ರಾಂಶುಪಾಲೆ ಡಾ.ವಿಜಯಲಕ್ಷಿ$್ಮ ಉಪಸ್ಥಿತರಿದ್ದರು.