ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಂತೆ ವಿಶ್ವಕರ್ಮ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಶಂಕರನಾರಾಯಣ ಪೊಲೀಸ್ ಠಾಣೆಗೆ ಮನವಿ ನೀಡಿದರು 
ಜಿಲ್ಲೆ

ಹಲ್ಲೆಗೈದಾತನ ಬಂಧನಕ್ಕೆ ಆಗ್ರಹ : ವಿಶ್ವಕರ್ಮ ಸಂಘಟನೆಯಿಂದ ಪೊಲೀಸರಿಗೆ ಮನವಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಸಿದ್ದಾಪುರ ಸಮೀಪದ ಜನ್ಸಾಲೆ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪೃಥ್ವಿ(13) ಮೇಲೆ ಹಲ್ಲೆ ನಡೆಸಿದ ಶಾಂತಾರಾಮ ಶೆಟ್ಟಿ ನಾರುಮಕ್ಕಿ (56) ಎಂಬಾತನನ್ನು ಬಂಧಿಸುವಂತೆ ವಿಶ್ವಕರ್ಮ ಸಂಘಟನೆಯಿಂದ ಶಂಕರನಾರಾಯಣ ಪೊಲೀಸ್ ಠಾಣೆಗೆ ಭಾನುವಾರ ಮನವಿ ನೀಡಲಾಯಿತು.

ಶಂಕರನಾರಾಯಣ ಪೊಲೀಸ್ ಠಾಣೆ ಮುಂಭಾಗ ವಿಶ್ವಕರ್ಮ ಸಂಘಟನೆ ಮುಖಂಡರು ಸಭೆ ನಡೆಸಿದರು. ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಮಾತನಾಡಿ, ಹಲ್ಲೆಗೈದಾತನನ್ನು ಬಂಧಿಸದಿದ್ದಲ್ಲಿ ಜಿಲ್ಲಾಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಾಸೀರ್‌ಹುಸೇನ್ ಮನವಿ ಸ್ವೀಕರಿಸಿ, ತಪ್ಪಿತಸ್ಥನನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಹಿಂದು ಜಾಗರಣ ವೇದಿಕೆ ಮುಖಂಡ ಚಂದ್ರ ಆಚಾರ್ಯ ಶಿರಿಯಾರ, ನಮ್ಮ ಭೂಮಿ ಸಂಸ್ಥೆಯ ಗಣೇಶ ಶೆಟ್ಟಿ, ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, 2ನೇ ಮೊಕ್ತೇಸರ ಪ್ರಭಾಕರ ಆಚಾರ್ಯ ಚಿತ್ತೂರು, ಹಿಂದು ಜಾಗರಣಾ ವೇದಿಕೆ ಮುಖಂಡ ಚಂದ್ರ ಆಚಾರ್ಯ ಶಿರಿಯಾರ, ನಮ್ಮ ಭೂಮಿ ಸಂಸ್ಥೆ ಗಣೇಶ್ ಶೆಟ್ಟಿ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ಉದಯ ಆಚಾರ್ಯ, ಮಾಗಣಿ ಮೊಕ್ತೇಸರ ಕೃಷ್ಣಯ್ಯ ಆಚಾರ್ಯ ಜನ್ಸಾಲೆ, ರಾಘವೇಂದ್ರ ಆಚಾರ್ಯ ಉಳ್ಳೂರು-74, ಹಳ್ಳಾಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ಜಯರಾಮ ಆಚಾರ್ಯ ಹಳ್ಳಾಡಿ, ಅಮಾಸೆಬೈಲು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ರತ್ನಾಕರ ಆಚಾರ್ಯ ಕೆಲ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಕಾರೆಬೈಲು, ನಾಗರಾಜ ಆಚಾರ್ಯ ಗೋಳಿಯಂಗಡಿ, ಪ್ರಕಾಶ್ ಆಚಾರ್ಯ ಕೊಕ್ಕರ್ಣೆ, ಹಲ್ಲೆಗೊಳಗಾದ ಬಾಲಕನ ತಂದೆ ರಾಘವೇಂದ್ರ ಆಚಾರ್ಯ, ತಾಯಿ ಪ್ರತಿಮಾ ಪಾಲ್ಗೊಂಡಿದ್ದರು.