ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 66/11ಕೆವಿ ಉಪಕೇಂದ್ರಗಳ ಸ್ಥಾಪನೆಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜೆಸ್ಕಾಂ ಇಲಾಖೆಯ ಎಇಇ ನಾಗರಾಜ ಕುರೆಕುಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮ ಘಟಕದ ಅಧ್ಯಕ್ಷ ಪರಶುರಾಮ, ಪ್ರಧಾನ ಕಾರ್ಯದರ್ಶಿ ಹೇಮಪ್ಪ, ಗೌರವಾಧ್ಯಕ್ಷ ಡೊಳ್ಳಿನ ಬಸವರಾಜ ಇತರರಿದ್ದರು. 
ಜಿಲ್ಲೆ

ವಿದ್ಯುತ್ ಉಪಕೇಂದ್ರಕ್ಕೆ ನಿವೇಶನ ನೀಡುವಂತೆ ಆಗ್ರಹ

ಗಾಯತ್ರಿ ಮಾಲಿಪಾಟೀಲ್

ಹಗರಿಬೊಮ್ಮನಹಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪ್ರಸರಣ ನಿಗಮದಿಂದ 66/11 ಕೆವಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಅನುದಾನ ಮಂಜೂರು ಆಗಿದ್ದು, ಕೂಡಲೇ ನಿವೇಶನಗಳನ್ನು ಒದಗಿಸುವಂತೆ ಆಗ್ರಹಿಸಿ ವಿವಿಧ ಇಲಾಖೆಗಳಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘ ಕಿತ್ತನೂರು ಗ್ರಾಮ ಘಟಕದ ಪ್ರದಾನ ಕಾರ್ಯದರ್ಶಿ ಎಚ್.ಹೇಮಣ್ಣ ಮಾತನಾಡಿ, ತೆಲುಗೋಳಿ, ವರದಾಪುರ ಮತ್ತು ಮಾಲವಿ ಗ್ರಾಮಗಳಲ್ಲಿ ವಿದ್ಯುತ್ ಪ್ರಸಾರಣ ನಿಗಮದಿಂದ ಉಪಕೇಂದ್ರಗಳ ಸ್ಥಾಪನೆಗೆ ಯೋಜನೆ ಕೈಗೊಂಡಿದ್ದು, ಪ್ರತಿ ಕೇಂದ್ರಕ್ಕೆ 3ಎಕರೆ ನಿವೇಶನ ನೀಡಬೇಕಾಗಿದೆ. ವಿಳಂಬಮಾಡದೇ ತಹಸೀಲ್ದಾರ್, ತಾಪಂ ಇಒ ಹಾಗೂ ಜೆಸ್ಕಾಂ ಇಲಾಖೆಯ ಎಇಇ ಅವರು ಚರ್ಚಿಸಿ ನಿವೇಶನ ಒದಗಿಸಿ ಉಪಕೇಂದ್ರಗಳ ಸ್ಥಾಪನೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ಎಂ.ಎನ್.ಗೌಸ್ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಹೆಚ್ಚುವರಿ ವಿದ್ಯುತ್ ಅವಶ್ಯವಾಗಿದ್ದು, ಉಪಕೇಂದ್ರಗಳ ಸ್ಥಾಪನೆಯಿಂದ ಅನುಕೂಲವಾಗಲಿದೆ. ಕೂಡಲೇ ಅಧಿಕಾರಿಗಳು ನಿವೇಶನ ನೀಡಬೇಕು ಎಂದರು. ಉಪತಹಸೀಲ್ದಾರ್ ಶಿವಕುಮಾರ ಗೌಡ, ತಾಪಂ ಇಒ ಡಾ.ಪರಮೇಶ್ವರಪ್ಪ ಹಾಗೂ ಜೆಸ್ಕಾಂ ಇಲಾಖೆ ಎಇಇ ನಾಗರಾಜ ಕುರೆಕುಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಕಿತ್ತನೂರು ಗ್ರಾಮ ಘಟಕದ ಅಧ್ಯಕ್ಷ ಎಚ್.ಪರಶುರಾಮ, ಗೌರವಾಧ್ಯಕ್ಷ ಡೊಳ್ಳಿನ ಬಸವರಾಜ, ಸದಸ್ಯರಾದ ಹೋಟಲ್ ಕೊಟ್ರಪ್ಪ, ಹ್ಯಾಟಿ ಹೊಳಿಯಪ್ಪ, ಎಚ್.ಚಂದ್ರಶೇಖರ ಪಾಟೀಲ್, ಕರೆಕಲ್ ದುರುಗಪ್ಪ, ಸಣ್ಣ ದುರುಗಪ್ಪ ಇತರರಿದ್ದರು.