ಜಿಲ್ಲೆ

ಬರಪರಿಹಾರ ಕೈಗೊಳ್ಳಲು ಆಗ್ರಹ

Davangere - Desk - Mahesh Babu E

ಚಳ್ಳಕೆರೆ: ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಕೂಡಲೇ ಬರಪರಿಹಾರ ಕಾರ್ಯ ಯೋಜನೆಗಳಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಗ್ರಹಿಸಿದ್ದಾರೆ.

ಬರ ಅಧ್ಯಯನ ನಡೆಸುವುದು, ಸಭೆ ಸಮಾರಂಭ ಮೂಲಕ ಜನರ ಸಂಕಷ್ಟ ಕೇಳುವ ನಾಟಕೀಯ ಬೆಳವಣಿಗೆಗಳನ್ನು ಕೈಬಿಡಬೇಕು. ಮಳೆ ಕೊರತೆಯಿಂದ ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ಪ್ರತಿ ಪಂಚಾಯಿತಿ ಹಂತದಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಹಳ್ಳಿಗಳಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ರಿಪೇರಿ ಮಾಡಿಸಿ, ನೀರಿನ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.