ಜಿಲ್ಲೆ

ಬೆಂಗಳೂರಿನಲ್ಲಿ ‘ರೆಡಿ ಟು ಮೂವ್’ಗೆ ಭಾರಿ ಡಿಮಾಂಡ್

malli
ನಿರ್ಮಾಣ ಹಂತದಲ್ಲಿರುವ ಅಪಾರ್ಟ್​ವೆುಂಟ್​ಗಳ ಖರೀದಿಗಿಂತ ಈಗಾಗಲೇ ನಿರ್ವಣಗೊಂಡು ‘ರೆಡಿ ಟು ಮೂವ್’ ಅಪಾರ್ಟ್​ವೆುಂಟ್​ಗಳ ಖರೀದಿಸಲು ಬೆಂಗಳೂರಿನ ಗ್ರಾಹಕರು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬ ಸಂಗತಿ ಅಧ್ಯಯನ ವರದಿಯಿಂದ ದೃಢವಾಗಿದೆ. ನಿರ್ಮಾಣ ಹಂತದ ಕಟ್ಟಡ ಖರೀದಿಗಿಂತ ಈಗಾಗಲೇ ನಿಮಾರ್ಣಗೊಂಡಿರುವ ಕಟ್ಟಡಗಳ ಖರೀದಿಸುವುದರಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂಬ ವಿಚಾರ ಗೊತ್ತಾಗಿದೆ.

ನಿರ್ಮಾಣ ಹಂತದ ಮತ್ತು ‘ರೆಡಿ ಟೂ ಮೂವ್’ ಅಪಾರ್ಟ್​ವೆುಂಟ್ ನಡುವಿನ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿರಲಿದೆ. ಆದ್ದರಿಂದ, ಜಿಎಸ್​ಟಿ, ನೋಂದಣಿ ಸೇರಿ ಇನ್ನಿತರ ಖರ್ಚು ವೆಚ್ಚಗಳನ್ನು ತಗ್ಗಿಸಲು ಸಿದ್ಧವಾಗಿರುವ ಅಪಾರ್ಟ್​ವೆುಂಟ್​ಗಳಿಗೆ ಖರೀದಿದಾರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಪಾರ್ಟ್​ವೆುಂಟ್​ಗಳಿಗೆ ಆಸ್ತಿಯ ಮೇಲೆ ಭೂ ತೆರಿಗೆ ಆಧಾರದಲ್ಲಿ ಶೇ.5 ಜಿಎಸ್​ಟಿ ಶುಲ್ಕ ಮತ್ತು ಸಿದ್ಧವಾದ ಅಪಾರ್ಟ್ ಮೆಂಟ್​ಗಳಲ್ಲಿ ಶೂನ್ಯ ಜಿಎಸ್​ಟಿ ಇರುತ್ತದೆ.

ಹೀಗಾಗಿ ಮನೆ ಖರೀದಿಸುವ ವೆಚ್ಚ ಕೂಡ ಕಡಿಮೆಯಾಗುತ್ತದೆ ಎಂದು ಖರೀದಿದಾರರು ಸಿದ್ಧವಾದ ಅಪಾರ್ಟ್​ವೆುಂಟ್​ಗಳ ಕಡೆ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಭಾರತದ ಏಳು ನಗರಗಳಲ್ಲಿ ‘ರೆಡಿ ಟೂ ಮೂವ್’ ವಸತಿ ಆಸ್ತಿಗಳ ಬೆಲೆಗಳು ಸರಾಸರಿ ಶೇ.3 ರಿಂದ 7 ಪ್ರೀಮಿಯಂನಲ್ಲಿದೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ್ದ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಕೆಲವು ಸಂದರ್ಭದಲ್ಲಿ ಖರೀದಿದಾರರು ಸಮರ್ಪಕವಾಗಿ ಪ್ರಾಜೆಕ್ಟ್​ಗಳ ಬಗ್ಗೆ ಪರಿಶೀಲಿಸಿ ಮುಂದಿನ ಹೆಜ್ಜೆಯಿಟ್ಟರೆ ಜಿಎಸ್​ಟಿಯೊಂದಿಗೆ ಒಟ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನದ ಮೂಲಕ ತಿಳಿಸಲಾಗಿದೆ.

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ದೆಹಲಿ, ಹೈದರಾಬಾದ್ ಹಾಗೂ ಚೆನ್ನೈನಲ್ಲಿನ ಎರಡು ವರ್ಗದ ಆಸ್ತಿಗಳ ನಡುವಿನ ಸರಾಸರಿ ಬೆಲೆಯಲ್ಲಿನ ವ್ಯತ್ಯಾಸವು 2017ರಲ್ಲಿ ಶೇ.8-12 ಮತ್ತು 2018ರಲ್ಲಿ ಶೇ.5-9ರಷ್ಟಿತ್ತು. ನಿರ್ಮಾಣ ಹಂತದ ಅಪಾರ್ಟ್​ವೆುಂಟ್​ಗಳಿಗೆ ಹೋಲಿಸಿದರೆ ಕೋಲ್ಕತ್ತಾದ ಸಿದ್ಧ ಆಸ್ತಿಗಳ ಬೆಲೆಗಳನ್ನು ಸರಾಸರಿ 3.5 ಶೇಕಡಾ ಪ್ರೀಮಿಯಂ ಇದೆ.

ವಿಳಂಬ ಮತ್ತು ನಿರ್ಮಾಣ ಗುಣಮಟ್ಟ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿರುವ ಗ್ರಾಹಕರು, ನಿರ್ಮಾಣ ಹಂತದ ಅಪಾರ್ಟ್​ವೆುಂಟ್​ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೀಮಿತ ವಸತಿ ಮಾರಾಟದ ಮಾರುಕಟ್ಟೆ ಸನ್ನಿವೇಶದಲ್ಲಿ ಬೆಲೆ ಏರಿಕೆಯಿಂದ ಖರೀದಿದಾರರು ಅಪಾರ್ಟ್​ವೆುಂಟ್ ಖರೀದಿಸಲು ನಿರಾಸಕ್ತಿ ತೋರುತ್ತಾರೆ. ಒಂದು ವೇಳೆ ಬೆಲೆ ಏರಿಕೆಯಾದರೂ ಅಪಾರ್ಟ್​ವೆುಂಟ್​ಗಳು ಮಾರಾಟವಾಗುವುದಿಲ್ಲ. ಇದರಿಂದ ಬಿಲ್ಡರ್​ಗಳಿಗೆ ಮತ್ತೊಂದು ಸಮಸ್ಯೆ ತರುತ್ತದೆ. ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ಬಾಡಿಗೆ ಮತ್ತು ಪೂರ್ವ ಇಎಂಐ ಎರಡನ್ನೂ ಪಾವತಿಸುವ ಬದಲು ಸಿದ್ಧ ಅಪಾರ್ಟ್​ವೆುಂಟ್ ಖರೀದಿಸಲು ಖರೀದಿದಾರರು ಸಿದ್ಧರಾಗಿರುತ್ತಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

  • ನಿರ್ಮಾಣ ಹಂತದ ಮನೆ ಖರೀದಿ ಸಮಸ್ಯೆ
  • ಆಸ್ತಿಯ ಮೇಲೆ ಭೂ ತೆರಿಗೆ ಪಾವತಿ ಆಧಾರದಲ್ಲಿ ಶೇ.5 ಜಿಎಸ್​ಟಿ ಶುಲ್ಕ
  • ನಿರ್ಮಾಣ ಹಂತದ ಆಸ್ತಿಗೆ ಬಾಡಿಗೆ ಹಾಗೂ ಪೂರ್ವ ಇಎಂಐ ಪಾವತಿ
  • ನಿಗದಿತ ಸಮಯಕ್ಕೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ
  • 3 ಅಥವಾ 5 ವರ್ಷದ ಯೋಜನೆಯಾದರೆ ಈ ಅವಧಿಯಲ್ಲಿ ತಕರಾರು ಸೃಷ್ಟಿ
  • ಮನೆ ಹಸ್ತಾಂತರ ವೇಳೆ ಬೆಲೆ ಏರಿಕೆ ಹೆಸರಲ್ಲಿ ಮತ್ತೆ ಹಣಕ್ಕೆ ಬೇಡಿಕೆ ಸಾಧ್ಯತೆ
  • ಮೂಲಸೌಕರ್ಯ ಒದಗಿಸುವ ವಿಚಾರದಲ್ಲಿ ಬಿಲ್ಡರ್-ಗ್ರಾಹಕ ನಡುವೆ ಕಿತ್ತಾಟ

| ಬೇಲೂರು ಹರೀಶ