ಚಿಕ್ಕಮಗಳೂರು ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ರಂಗನಾಥ್, ರಾಕೇಶ್ ಮರಡಿ, ಅಕ್ಷಯ್, ನರೇಂದ್ರ, ಸಂತೋಷ್ ಕೋಟ್ಯಾನ್, ಚೈತ್ರಾ ಗೌಡ ಮತ್ತಿತರರಿದ್ದರು. 
ಜಿಲ್ಲೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಒತ್ತಾಯ

ಚಿಕ್ಕಮಗಳೂರು: ಬಾಂಗ್ಲಾ ದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದುಗಳ ಮೇಲೆ ಜಿಹಾದಿಗಳು ದಾಳಿ ನಡೆಸಿ ಕೊಲೆ ಮಾಡುತ್ತಿದ್ದಾರೆ. ಹಿಂದುಗಳ ಆಸ್ತಿಪಾಸ್ತಿ ಹಾಗೂ ದೇವಾಲಯಗಳನ್ನು ನಾಶ ಮಾಡಲಾಗುತ್ತಿದ್ದು, ಕೂಡಲೇ ಹಿಂದುಗಳಿಗೆ ರಕ್ಷಣೆ ಒದಗಿಸಬೇಕು ಎಂದು ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬಾಂಗ್ಲಾದಲ್ಲಿ ಹಿಂದುಗಳ ಸ್ಥಿತಿ ಶೋಚನೀಯವಾಗಿದೆ. ಹಿಂದುಗಳು ಬದುಕಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ. ತಮ್ಮನ್ನು ರಕ್ಷಣೆ ಮಾಡುವಂತೆ ಬಾಂಗ್ಲಾದ ಹಿಂದುಗಳು ಮೊರೆಯಿಡಲಾರಂಭಿಸಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಹಿಂದುಗಳಿಗೆ ರಕ್ಷಣೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಗನಾಥ್, ರಾಕೇಶ್ ಮರಡಿ, ಅಕ್ಷಯ್, ನರೇಂದ್ರ, ಸಂತೋಷ್ ಕೋಟ್ಯಾನ್, ಚೈತ್ರಾ ಗೌಡ ಮತ್ತಿತರರಿದ್ದರು.