????????????? 
ಜಿಲ್ಲೆ

ಸೋಯಾಬೀನ್​ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಸೋಮಲಿಂಗ ತಳವಾರ

ಬೈಲಹೊಂಗಲ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೋಯಾಬೀನ್​ ಖರೀದಿ ಕೇಂದ್ರ ಆರಂಭ ಹಾಗೂ ಖರೀದಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ನೇಗಿಲ ಯೋಗಿ ರಾಜ್ಯ ರೈತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿ ಹಾಗೂ ತಹಸೀಲ್ದಾರ್​ಗೆ ಸೋಮವಾರ ಮನವಿ ಸಲ್ಲಿಸಿದರು.

ಜಿಲ್ಲಾಧ್ಯ ಶಂಕರ ಬೋಳನ್ನವರ, ತಾಲೂಕಾಧ್ಯ ಸೋಮನಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಈ ವರ್ಷ ಸೋಯಾಬೀನ್​ ಬೆಳೆದ ೇತ್ರ ಹೆಚ್ಚಿದ್ದು, ಈಗಾಗಲೇ ಕಳಪೆ ಸೋಯಾಬೀನ್​ ಬೀಜ, ಕ್ರಿಮಿನಾಶಕ ಹಾಗೂ ಕೀಟ ಬಾಧೆಯಿಂದ ರೈತರು ಕಂಗೆಟ್ಟಿದ್ದಾರೆ. ಹೀಗಾಗಿ, ಶ್ರೀವೇ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸೋಯಾಬೀನ್​ ಖರೀದಿ ಕೇಂದ್ರ ಆರಂಭಿಸಿ ಬೆಳೆ ಖರೀದಿಸಬೇಕು ಎಂದು ಆಗ್ರಹಿಸಿದರು.

ಈಗಿರುವ ಕೇವಲ 5 ಕ್ವಿಂಟಾಲ್​ ಬದಲು ಪ್ರತಿ ರೈತರಿಂದ 10&12 ಕ್ವಿಂಟಾಲ್​ ಸೋಯಾಬೀನ್​ ಖರೀದಿಸಬೇಕು. ಕಳೆದ ವರ್ಷ ಸಾವಿರಾರು ರೈತರು ನೋಂದಣಿ ಮಾಡಿದರೂ ಕನಿಷ್ಠ ಬೆಂಬಲ ದರದಲ್ಲಿ ಸೋಯಾಬೀನ್​ ಖರೀದಿಸದೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು. ರೈತ ಮುಖಂಡರಾದ ಮಹಾಂತೇಶ ಕಮತ, ಜಗದೀಶ ಬೂದಿಹಾಳ, ರಮೇಶ ಯರಗಟ್ಟಿ ಮಾತನಾಡಿದರು. ಮುಖಂಡರಾದ ಮೋಹನ ವಕ್ಕುಂದ, ಉದಯ ಬೂದಿಹಾಳ, ಆನಂದ ವಾಲಿ, ರಮೇಶ ಮರಕುಂಬಿ, ಮಲ್ಲಪ್ಪ ಯರಡಾಲ, ಮಡಿವಾಳಪ್ಪ ಉಳವಿನಾಯ್ಕರ, ಮಡಿವಾಳಪ್ಪ ಜಾಡರ, ಪ್ರಶಾಂತ ಮಾಕಿ, ಸೋಮು ಮೂಗಬಸವ, ಉಮೇಶ ಬೋಳೆತ್ತಿನ, ಈರಣ್ಣ ಸಂಪಗಾಂವಿ, ಸುರೇಶ ಹೊಳಿ, ಬಸವರಾಜ ದುಗ್ಗಾಣ್ಣಿ, ಜಗದೀಶ ಬೋಳನ್ನವರ, ಅದೃಶ್ಯಪ್ಪ ಹುಚ್ಚನ್ನವರ, ಮಹಾಂತೇಶ ಬೋಳನ್ನವರ, ಬಸವರಾಜ ಜಂಬಗಿ, ಅನಿಲ ಗಿರನವರ, ಶ್ರೀಕಾಂತ ಪಟ್ಟಣಶೆಟ್ಟಿ ಇತರರಿದ್ದರು.