VEERESH 
ಜಿಲ್ಲೆ

ಸರ್ಕಾರಿ ಶಾಲೆ ಭೋಜನಾಲಯ ಪ್ರಾರಂಭಕ್ಕೆ ಒತ್ತಾಯ

Raichur - Reporter - Rachhai Swamy

ರಾಯಚೂರು ತಾಲ್ಲೂಕಿನ ಕುರುಬದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯ ಕೊಠಡಿ ನೆನಗುದಿಗೆ ಬಿದ್ದಿದನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೋಜನಾಲಯ ಕೊಠಡಿ ಕಾಮಗಾರಿಗೆ 14 ರಿಂದ 15 ಲಕ್ಷ ಅನುದಾನ ಗ್ರಾಮ ಪಂಚಾಯಿತಿಯಿಂದ ಬಿಡುಗಡೆಯಾಗಿದೆ. ಈಗಾಗಲೇ ಕಾಮಗಾರಿ ತೀರಾ ಕಳಪೆ ಮಟ್ಟದಲ್ಲಿ ನಿರ್ಮಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಜೆಇ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ನಕಲಿ ಬಿಲ್ಲು ಸೃಷ್ಟಿಸಿ ಸರ್ಕಾರದ ಅನುದಾನ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಲೆಯಲ್ಲಿ ಭೋಜನಾಲಯ ಇಲ್ಲದೆ ಮಕ್ಕಳು ಬಿಸಿಲು, ಗಾಳಿ, ಮಳೆ ಎನ್ನದೆ ಶಾಲಾ ಆವರಣದಲ್ಲಿ ಊಟ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟವರು ಶಾಲಾ ಭೋಜನಾಲಯ ಕೊಠಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪೂರ್ಣಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಂಜನೇಯ, ಈರಣ್ಣ, ಮಲ್ಲಯ್ಯ, ಗೋವಿಂದ, ಸಿದ್ದಪ್ಪ, ಆನಂದ ಇದ್ದರು.