ಹೊಳೆಆಲೂರ:20-25 ಹಳ್ಳಿಗಳಿಗೆ ಹೊಳೆಆಲೂರ ಕೇಂದ್ರ ಸ್ಥಾನವಾಗಿದ್ದು, ಗದಗನಿಂದ ಹೊಳೆಆಲೂರ, ಬದಾಮಿ, ಬಾಗಲಕೋಟ ಮಾರ್ಗವಾಗಿ ಸಂಚರಿಸುವ ಗದಗ ಮುಂಬಯಿ ರೈಲು ಗಾಡಿಯನ್ನು ಕೇವಲ ಒಂದು ನಿಮಿಷ ಹೊಳೆಆಲೂರ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಹೊಳೆಆಲೂರ ವಾಣಿಜ್ಯೋದ್ದಮ ಸಂಸ್ಥೆಯ ವತಿಯಿಂದ ಶನಿವಾರ ಹುಬ್ಬಳ್ಳಿ ಡಿವಿಜನ್ ಡಿ.ಜಿ.ಎಂ. ಮೀನಾಕುಮಾರಿ ಅವರಿಗೆ ಮನವಿ ಅರ್ಪಿಸಲಾಯಿತು.
ತಮ್ಮ ರೇಲ್ವೆ ಇಲಾಖೆಯ ವತಿಯಿಂದ ಆಫೀಸ್ ಹಾಗೂ ಸಿಬ್ಬಂದಿಯ ವಸತಿ ನಿಲಯಗಳ ಅನುಕೂಲಕ್ಕಾಗಿ ನಿರ್ಮಿಸದ ಅಂದಾಜು ! ಕೀ.ಮೀ.ಉದ್ದದ ಬೃಹತ್ ಗಟಾರು ನೀರು ಹರಿದು ಬಂದು ನೀವೇ 15 ವರ್ಷಗಳ ಹಿಂದೆ ಹೊಳೆಆಲೂರ ಮುಖ್ಯ ರಸ್ತೆಯ ಮೇಲೆ ರೇಲ್ವೆ ಇಲಾಖೆಯವರು ನಿರ್ಮಿಸಿದ ಮೇಲ್ಸತುವೆ ಬಂದು ನಿಂತು ಸೇತುವೆಗೆ ಹಾನಿ ಮಾಡುತ್ತದೆ. ಸರಾಗವಾಗಿ ನೀರು ಹರಿಯದಂತೆ ಕಳಪೆ ಕಾಮಗಾರಿ ಹಾಗೂ ಮಳೆಯ ನೀರು ಸೇರಿ ಜನ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನು ಸರಿಪಡಿಸುವಂತೆ ವಾಣಿಜ್ಯೋದ್ದಮ ಸಂಸ್ಥೆಯ ವತಿಯಿಂದ ಹಲವು ಬಾರೆ ಲಿಖಿತ ಮನವಿ ಅರ್ಪಿಸಿದರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಶೀಘ್ರ ಇದನ್ನು ಸರಿ ಪಡಿಸಿಬೇಕು ಎಂದು ಮನವಿ ಅರ್ಪಿಸಲಾಯಿತು.