ಜಿಲ್ಲೆ

ಜಿಲ್ಲೆಗೆ ಮಂತ್ರಿ ಸ್ಥಾನ ಕಲ್ಪಿಸಲು ಬೇಡಿಕೆ

ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ - ಕ್ಷೇತ್ರದ ಅಭಿವೃದ್ಧಿಗೆ 2,100 ಕೋಟಿ ರೂ. ಅನುದಾನ

ಕೋಲಾರ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭ ಬಂದರೆ ಕೋಲಾರ ಜಿಲ್ಲೆಗೆ ಅವಕಾಶ ಕಲ್ಪಿಸಲು ನಾಲ್ವರು ಶಾಸಕರು ಬೇಡಿಕೆ ಇಟ್ಟಿದ್ದು, ಯಾವುದೇ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿದರೂ ಖುಷಿ ಪಡುತ್ತೇವೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 4 ಮಂದಿ ಶಾಸಕರು ಮಂತ್ರಿ ಆಗಲು ಅರ್ಹರಿದ್ದಾರೆ. ಅವಕಾಶ ಕಲ್ಪಿಸಲು ಬೇಡಿಕೆಯಿಟ್ಟಿದ್ದು, ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು ಎಂದರು.

ಬಂಗಾರಪೇಟೆ ಶಾಸಕರು ಮೂರು ಬಾರಿ, ಕೆಜಿಎ್​ ಶಾಸಕರು ಎರಡು ಬಾರಿ ಹಾಗೂ ನಾನು ಸಹ ಎರಡು ಬಾರಿ ಆಯ್ಕೆಯಾಗಿದ್ದೇನೆ, ಕೋಲಾರ ಶಾಸಕರಿಗೆ ಸಿಕ್ಕಿದರೂ ಖುಷಿ ಪಡೋಣ, ಸುಮ್ಮನೆ ಗೊಂದಲ ಸೃಷ್ಟಿ ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಮಂತ್ರಿಗಳ ಬಗ್ಗೆ ಟೀಕೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲ ಶಾಸಕರಿಗೂ ಸುಲಭವಾಗಿ ಯಾವುದೇ ಸಂದರ್ಭದಲ್ಲಿ ಲಭ್ಯವಾಗುತ್ತಿದ್ದಾರೆ. ಜಿಲ್ಲೆಗೆ ಏನು ಕೆಲಸ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೆವೊ ಆ ಎಲ್ಲ ಕೆಲಸಗಳು ಆಗುತ್ತಿವೆ. ನಾರಾಯಣಸ್ವಾಮಿ ಅವರು ಅಸಮಾಧಾನಗೊಂಡಿರುವ ಬಗ್ಗೆ ಗೊತ್ತಿಲ್ಲ, ನಮಗಂತೂ ಸಮಾಧಾನವಿದೆ ಎಂದರು.

ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದ್ದು, ಮಂಜೂರು ಮಾಡಲು ಸಚಿವರ ಬಳಿ ಬೇಡಿಕೆ ಇಟಿದ್ದೇವೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದು, ಇದೇ ಬಜೆಟ್​ನಲ್ಲಿ ಘೋಷಣೆ ಆಗುವ ನಿರೀೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್​ ಅವರನ್ನು ಸಿಎಂ ಮಾಡುವ ಕುರಿತು ಪ್ರತಿಕ್ರಿಯಿಸಿ, ಇದೆಲ್ಲ ಹೈಕಮಾಂಡ್​ಗೆ ಬಿಟ್ಟ ವಿಚಾರ, ಅವರು ಸಿಎಂ ಆಗಬೇಕು ಎಂದು ಧ್ವನಿ ಎತ್ತುವವರ ಬಗ್ಗೆ ತಾಳ್ಮೆ ಕಳೆದುಕೊಂಡಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್​ ಇದ್ದಾರೆ. ಅವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಇದೇ ವ್ಯಕ್ತಿಗೆ ಸಿಎಂ ಸ್ಥಾನ ಕೊಡಿ ಎಂದು ಕೇಳುವವನಲ್ಲ ಎಂದು ಉತ್ತರಿಸಿದರು.

ಕ್ಷೇತ್ರದ ಅಭಿವೃದ್ಧಿಗಾಗಿ 2,100 ಕೋಟಿ ರೂ. ಅನುದಾನ ತಂದಿದ್ದೆವೆ. ನಮಗೆಲ್ಲ ಮಂತ್ರಿಗಿರಿಗಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಮುಂದಿನ ವಾರ ಅಭಿವೃದ್ಧಿ ಕೆಲಸಗಳಿಗೆ ಸಿದ್ದರಾಮಯ್ಯ ಅವರೇ ಚಾಲನೆ ಕೊಡಲಿದ್ದಾರೆ ಎಂದು ಹೇಳಿದರು.

ಒಕ್ಕೂಟಕ್ಕೆ ಧಕ್ಕೆ ಬೇಡ

ಕೋಲಾರ ಹಾಲು ಸಂಗಳ ಒಕ್ಕೂಟದ ಆಡಳಿತ ಮಂಡಳಿ ಅವಧಿ ಮುಗಿದು ಚುನಾವಣೆ ನಡೆಸಲು ಅಡಳಿತಾಧಿಕಾರಿ ನೇಮಕ ಆಗಿದೆ. ಕೆಲವರು 12-5, 12-6 ವಿರುದ್ಧ ಕೋರ್ಟ್​ ಮೋರೆ ಹೋಗಿದ್ದರು. ಆದರೆ ಕೋರ್ಟ್​ 12-5ಗೆ ಆದೇಶ ಮಾಡಿದ್ದು, ನ್ಯಾಯಾಲಯವನ್ನೇ ಯಾಮಾರಿಸುವ ಕೆಲಸ ಮಾಡಿದ್ದಾರೆ. ಸರ್ವ ಸದಸ್ಯರ ಸಭೆ ನಡೆಸಿ ಚುನಾವಣೆಗೆ ಕ್ರಮವಹಿಸಲು ಆದೇಶಿಸಿದೆ. ಒಕ್ಕೂಟಕ್ಕೆ ಇತಿಹಾಸವಿದ್ದು ಅದಕ್ಕೆ ಆಡಳಿತ ಮಂಡಳಿ ಬೇಕಾಗಿದೆ. ಒಕ್ಕೂಟಕ್ಕೆ ಧಕ್ಕೆಯುಂಟು ಮಾಡುವ ಕೆಲಸ ಯಾರೂ ಮಾಡಬಾರದು ಎಂದು ಕಿವಿಮಾತು ಹೇಳಿದರು. ರಿಯಲ್​ ಕಾಂಗ್ರೆಸ್​ನವರು ಯಾರೂ ವಿಭಜನೆಯಾಗಿಲ್ಲ. ನಾರಾಯಣಸ್ವಾಮಿ ಅವರು ಒಕ್ಕೂಟದಲ್ಲಿನ ಕೆಲ ಗೊಂದಲಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅಧಿಕಾರಿಗಳು ಮಾಹಿತಿ ಒದಗಿಸಲಿದ್ದಾರೆ ಎಂದು ನಂಜೇಗೌಡ ತಿಳಿಸಿದರು.

ಈ ಸರ್ಕಾರದಲ್ಲಿ ಇರಬೇಕಿತ್ತು

ರಮೇಶ್​ ಕುಮಾರ್​ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ರಮೇಶ್​ ಕುಮಾರ್​ ಅವರು ಇರಬೇಕಿತ್ತು, ಗೆದ್ದಿದ್ದರೆ ಅದು ಜಿಲ್ಲೆಗೆ ಅಲ್ಲ, ಇಡೀ ರಾಜ್ಯಕ್ಕೆ ಅನುಕೂಲವಾಗುತ್ತಿತ್ತು. ಅವರು ಮೂಲೆ ಗುಂಪು ಆಗಿಲ್ಲ, ಏನಾದರು ಕೆಲಸ ಆಗಬೇಕಿದ್ದರೆ ಅವರ ನಿವಾಸಕ್ಕೆ ಹೋಗಿ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಸರ್ಕಾರ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ನಂಜೇಗೌಡ ತಿಳಿಸಿದರು.

ಶೀಘ್ರದಲ್ಲೇ ಚುನಾವಣೆ

ಇನ್ನು ಡಿಸಿಸಿ ಬ್ಯಾಂಕ್​ ಚುನಾವಣೆ ನಡೆಸಲು ಕೋರ್ಟ್​ ಆದೇಶ ಮಾಡಿದ್ದು, ಎರಡು ಜಿಲ್ಲೆಯ ನಾಯಕರು ಸೇರಿ ಮಾತನಾಡಲಾಗಿದೆ. ಇಲ್ಲಿ ಯಾರೂ ಅಡ್ಡಿಪಡಿಸುತ್ತಿಲ್ಲ. ಮಹಿಳಾ ಸಂಗಳಿಗೆ ಸಹಕಾರ ಬ್ಯಾಂಕಿನಿಂದ ಬಡ್ಡಿ ರಹಿತವಾಗಿ ಸಾಲ ನೀಡಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಅವರು. ಶ್ರೀದಲ್ಲೇ ಚುನಾವಣೆ ನಡೆಯಲಿದೆ ಎಂದು ನಂಜೇಗೌಡ ಹೇಳಿದರು.