ಜಿಲ್ಲೆ

ಲೋಕಾಯುಕ್ತ ಪ್ರಾದೇಶಿಕ ಕಚೇರಿಗೆ ಬೇಡಿಕೆ

ಗಿರೀಶ ಸಗರ

ವಿಜಯಪುರ: ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್​ ವಿಭಾಗೀಯ ಪೀಠಗಳ ಮಾದರಿ ಲೋಕಾಯುಕ್ತ ಪ್ರಾದೇಶಿಕ ಕಚೇರಿ ಸ್ಥಾಪಿಸುವ ಬೇಡಿಕೆ ಇದ್ದು, ಅದರ ಜೊತೆಗೆ ಇನ್ನೂ ಎರಡು ಉಪ ಲೋಕಾಯುಕ್ತ ಹುದ್ದೆಗಳನ್ನು ಸೃಜಿಸುವ ಅಗತ್ಯವಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್​. ಫಣೀಂದ್ರ ತಿಳಿಸಿದರು.

ಲೋಕಾಯುಕ್ತ ಸಂಸ್ಥೆಗೆ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಬ್ಬಂದಿಯೂ ಪೂರ್ಣ ಪ್ರಮಾಣದಲ್ಲಿಲ್ಲ. ಹೀಗಾಗಿ ಸಿಬ್ಬಂದಿ ನೇಮಕದ ಜೊತೆಗೆ ಹೆಚ್ಚುವರಿಯಾಗಿ ಪ್ರಾದೇಶಿಕ ಕಚೇರಿ ಸ್ಥಾಪಿಸಿದರೆ ಕಾರ್ಯಭಾರ ಕಡಿಮೆಯಾಗಿ ಸಕಾಲಕ್ಕೆ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ. ಸಾರ್ವಜನಿಕರ ಸಮಸ್ಯೆ ನೀಗಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ ನೋಂದಣಿಯಾಗಿ ವಿಚಾರಣೆಗೆ ಬಾಕಿ ಇರುವ 18886 ಪ್ರಕರಣಗಳಿವೆ. ಇದರಲ್ಲಿ ಲೋಕಾಯುಕ್ತದ ಎದುರು&5495, ಉಪ ಲೋಕಾಯುಕ್ತ&1ರಲ್ಲಿ 7028, ಉಪ ಲೋಕಾಯುಕ್ತ&2 ರಲ್ಲಿ 6363 ಹಾಗೂ ಮಸಲೇನಿಯಸ್​&10324 ಪ್ರಕರಣಗಳಿವೆ.

ಲಾಖೆ ವಿಚಾರಣೆಯ&1413 ಪ್ರಕರಣಗಳಿವೆ. ಹೀಗಾಗಿ ಲೋಕಾಯುಕ್ತ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಹಂತ ಹಂತವಾಗಿ ನೇಮಕ ಪ್ರಕ್ರಿಯೆ ನಡೆಸಿದೆ. ಪೂರ್ಣ ಪ್ರಮಾಣದಲ್ಲಾಗಬೇಕೆಂದರು.