ಜಿಲ್ಲೆ

ಲೋಕಾಪುರ, ಧಾರವಾಡ ರೈಲ್ವೆ ಮಾರ್ಗಕ್ಕೆ ಆಗ್ರಹ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿ ಪದಾಧಿ-ಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೌಡ್ರಗೆ ಸೋಮವಾರ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಹೋರಾಟಗಾರರ ಒತ್ತಾಯದ ಮೇರೆಗೆ ಹೊಸ ರೈಲ್ವೆ ಮಾರ್ಗಕ್ಕಾಗಿ 2019ರಲ್ಲಿ ಸರ್ವೇ ನಡೆಸಿದ ಕೇಂದ್ರ ಸರ್ಕಾರ ಕಾಮಗಾರಿ ಆರಂಭಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. 20 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದರೂ ಪ್ರಯೋಜವಾಗಿಲ್ಲ. ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ದೂರಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಸಂಪರ್ಕ ಒದಗಿಸಲು ಕೂಡಲೇ ಉಭಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಆಡಳಿತ ಕಚೇರಿ, ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯ ಬಸೀರಅಹ್ಮದ್​ ಬೈರಕದಾರ, ವಕೀಲ ಜಿ.ಬಿ.ಅಮಟೂರ, ಮೋಹನ ಸೋರಿ, ಎಸ್​.ಕೆ. ಪಾಟೀಲ, ರಾಜು ಹರ್ಲಾಪುರ, ಮುಖಂಡರಾದ ಜಗದೀಶ ದೇವರಡ್ಡಿ, ಬಸವರಾಜ ಗುರಡ್ಡಿ, ದಾದಾಪೀರ್​ ಹಾಜಿ, ಮಂಜುನಾಥ ಮಾದರ, ಬಿ.ಎಲ್​.ಸಂಕನಗೌಡ್ರ, ಈರಣ್ಣ ಕಲ್ಯಾಣಿ, ಪ್ರಶಾಂತ ಅಂಗಡಿ, ವೀರೇಶ ಬಳಿಗೇರ, ಕಾಸಿಂ ಪಡದಾರ ಇತರರಿದ್ದರು.