ಕೆರೂರ : ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಎನ್ ಎಚ್-218 ನಾಲ್ಕು ಪಥಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸಿ, ಬೈಪಾಸ್ ರಸ್ತೆ ನಿರ್ಮೀಸುವಂತೆ ಕೇಂದ್ರ ಸರ್ಕಾರಕ್ಕೆ ಹೋರಾಟ ಸಮಿತಿ ಅಧ್ಯಕ್ಷ ಎನ್.ಬಿ. ಬನ್ನೂರ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿ ತಾಲೂಕಿನಲ್ಲೆ ಪಟ್ಟಣವು ಅತಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ರಸ್ತೆ ಅಗಲೀಕರಣದಿಂದ ರಸ್ತೆ ಬದಿ ವ್ಯಾಪಾರಿಗಳು ಹಾಗೂ ರಸ್ತೆಯ ಎರಡು ಬದಿ ಆಸ್ತಿ ಮಾಲೀಕರು ಸಂಪೂರ್ಣ ಆಸ್ತಿಯನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದಲ್ಲಿ ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಇನ್ನುಳಿದ ಎಲ್ಲವೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಇವೆ. ರಸ್ತೆ ಅಗಲೀಕರಣಕ್ಕೆ ಮಾಡಿದರೆ ಸಂಪೂರ್ಣ ಪಟ್ಟಣಕ್ಕೆ ಆರ್ಥಿಕವಾಗಿ ಹಿನ್ನಡೆಯಾಗುತ್ತದೆ. ಅಲ್ಲದೆ ಸಾರ್ವಜನಿಕ ಜೀವನದ ಮೇಲೆ ತೀವ್ರ ಪರಿಣಾಮ ಬಿರುತ್ತದೆ ಎಂದರು.
ಬಿ.ಬಿ. ನಿಲುಗಲ್, ಅಶೋಕ ಜಿಗಳೂರ, ಮಹಾಂತೇಶ ಘಟ್ಟದ, ಮುರಳಿಧರ ಕಂದಕೂರ, ರಂಗಣ್ಣ ದೇಸಾಯಿ, ಕುಮಾರ ಐಹೊಳ್ಳಿ ಇತರರಿದ್ದರು.