ಜಿಲ್ಲೆ

ಸೌಜನ್ಯಾಳ ಸಾವಿಗೆ ನ್ಯಾಯ ದೊರಕಿಸಲು ಆಗ್ರಹ

ಮೈಸೂರು: ಸೌಜನ್ಯಾಳ ಸಾವಿಗೆ ನ್ಯಾಯ ಕೊಡಬೇಕು, ಹಲವಾರು ಹೆಣ್ಣು ಮಕ್ಕಳ ಸಾವಿನ ಕುರಿತು ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯಿಸಿ ಭಾರತ ಭೀಮ್ಸೇನೆ ವತಿಯಿಂದ ಪಾದಯಾತ್ರೆ ನಡೆಸಲಾಯಿತು.

ನಗರದ ಪುರಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕರ್ತರು, ನಜರ್‌ಬಾದ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಎಸ್‌ಐಟಿ ತನಿಖೆ ಪಾರದರ್ಶಕವಾಗಿ ಯಾರ ಒತ್ತಡ ಇಲ್ಲದೆ ನಡೆಯಬೇಕು. ಸೌಜನ್ಯಾಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್, ಭಾರತ ಭೀಮ್ ಸೇನೆಯ ಅಧ್ಯಕ್ಷ ದಿನೇಶ್, ಯಶ್ವಂತ್, ನಾಗೇಶ್, ಬಸವಣ್ಣ, ರವಿಕುಮಾರ್, ಮಹೇಶ್, ಚೇತನ್ ಇತರರಿದ್ದರು.