ಲೋಕಾಪುರ ಎಪಿಎಂಸಿ ಆವರಣದಲ್ಲಿ ದಲಿತ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮಹೇಶ ಹುಗ್ಗಿ, ಅರುಣ ಮುಧೋಳ, ಕೃಷ್ಣಾ ಮಾದರ, ಲಕ್ಷ್ಮಣ ಮೇತ್ರಿ, ಸುರೇಶ ಹುಗ್ಗಿ ಇದ್ದರು. 
ಜಿಲ್ಲೆ

ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ಆಗ್ರಹ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ನಾಗಮೋಹನದಾಸ್ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಹಿರಿಯ ಹೋರಾಟಗಾರ ಕೃಷ್ಣಾ ಮಾದರ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನದಾಸ್ ಅವರ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಿದೆ. ಆದರೆ ವರದಿ ಜಾರಿ ಮಾಡಲು ಮುಂದಾಗಿಲ್ಲ. ಸರ್ಕಾರದ ಈ ನಡೆ ದಲಿತ ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯವಾದಿ ಅರುಣ ಮುಧೋಳ ಮಾತನಾಡಿ, ಆ.1 ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ಒಂದು ವರ್ಷವಾದರೂ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಾಕ್ರೋಶ ಪ್ರತಿಭಟನೆಗಳು ದೊಡಮಟ್ಟದಲ್ಲಿ ನಡೆದಿವೆ. ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಮುಖಂಡ ಅರ್ಜುನ ಕಾಂಬಳೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಾಯಕತ್ವದ ಛಾತಿ ತೋರಿಸುವಲ್ಲಿ ವಿಲರಾಗಿದ್ದಾರೆ ಎಂದರು.

ದಲಿತ ಮುಖಂಡ ಮಹೇಶ ಹುಗ್ಗಿ, ಲಕ್ಷ್ಮಣ ಮೇತ್ರಿ, ಈಶ್ವರ ಬೆಣಗಿ, ಸುನೀಲ ಕಂಬೋಗಿ, ಸುರೇಶ ಹುಗ್ಗಿ, ಶ್ರೀಕಾಂತ ಮಾದರ, ಶೇಖರ ಬಾಗಿ, ಶ್ರೀಕಾಂತ ಶಿವಕ್ಕನವರ, ದಶರಥ ದೊಡಮನಿ ಇತರರು ಇದ್ದರು.