H.ANJANEYYA 
ಜಿಲ್ಲೆ

ಜೂನ್ ಅಂತ್ಯದೊಳಗೆ ಒಳ ಮೀಸಲಾತಿ ಜಾರಿಗೆ ಒತ್ತಾಯ-ಎಚ್. ಅಂಜನೇಯ್ಯ

ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲು ವರ್ಗೀಕರಣ ಜನಗಣತಿಯನ್ನು ರಾಜ್ಯ ಸರ್ಕಾರದ ರಚಿಸಿರುವ ನ್ಯಾ.ನಾಗಮೋಹನದಾಸ ನೇತೃತ್ವದ ಏಕ ಸದಸ್ಯ ಸಮಿತಿ ಪ್ರಾರಂಭಿಸಿದ್ದು, ಜೂನ್ ಅಂತ್ಯದೊಳಗೆ ಒಳ ಮೀಸಲು ಜಾರಿಗೊಳಿಸಬೇಕೆಂದು ಮಾಜಿ ಸಚಿವ ಎಚ್. ಆಂಜಿನೇಯ್ಯ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್ ಎಂದು ಹೇಳಿದ್ದನ್ನು ಸಮರ್ಥಿಸಿಕೊಂಡು ದೇಶದಲ್ಲಿಯೇ ಮೊದಲ ಬಾರಿಗೆ ಎಸ್‌ಇಪಿ,ಟಿಎಸ್‌ಪಿ ಕಾಯ್ದೆ ರೂಪಿಸಿ ಜಾರಿಗೊಳಿಸಿದ್ದಾರೆ. 40 ಸಾವಿರ ಕೋಟಿ ರೂಗಳನ್ನು ಪರಿಶಿಷ್ಟ ಕಲ್ಯಾಣಕ್ಕೆ ಕಾಯ್ದಿರಿಸಿದ್ದಾರೆ. ಗುತ್ತಿಗೆ ಕೆಲಸಗಳಲ್ಲಿ ಎಸ್ಸಿ ಸಮೂದಾಯಕ್ಕೆ ಮೀಸಲು ನಿಗಧಿಪಡಿಸಿದ್ದು ಪರಿಶಿಷ್ಟ ಕಲ್ಯಾಣಕ್ಕಾಗಿ ಶ್ರಮಿಸುವ ಅವರು ಎರಡನೇ ಅಂಬೇಡ್ಕರ ಎಂದುಹೇಳಿದ್ದೇನೆ ಎಂದರು.

ಸುಪ್ರಿಂಕೋರ್ಟ್ ತೀರ್ಮಾನದಂತೆ ಹೊಸ ದತ್ತಾಂಶ ಸಂಗ್ರಹಿಸಲು ನ್ಯಾ.ನಾಗಮೋಹನದಾಸ ಸಮಿತಿ ಸಮೀಕ್ಷೆ ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಮಳೆ ಮತ್ತು ಬೇರೆ ಬೇರೆ ಕಾರಣಗಳಿಂದ ಸಮೀಕ್ಷೆ ನಿಧಾನಗತಿ ನಡೆಯುತ್ತಿದ್ದು ಆಯೋಗವೇ ಅವಧಿಯನ್ನು ವಿಸ್ತರಿಸಿದೆ. ತಿಂಗಳಾಂತ್ಯಕ್ಕೆ ಸಮೀಕ್ಷೆ ಸಂಪೂರ್ಣ ದತ್ತಾಂಶ ಕೈಸೇರಲಿದ್ದು ತ್ವರಿತವಾಗಿ ಜಾರಿಗೆ ಸರ್ಕಾರ ಮುಂದಾಗಬೇಕೆಂದರು. ಲಿಂಗಾಯತ ಬೇಡ ಜಂಗಮರು ಬೇಡ ಜಂಗಮ ಜಾತಿ ಪ್ರಮಾಣದ ಪತ್ರದ ಮೂಲಕ ಗಣತಿಯಲ್ಲಿ ಹೆಸರು ಸೇರಿಸುವದನ್ನು ನಿಲ್ಲಿಸಬೇಕು. ಅಸ್ಪಶೃರಲ್ಲದವರು ಎಸ್ಸಿ ಜಾತಿ ಪ್ರಮಾಣ ಪತ್ರದ ದುರುಪಯೋಗ ಪಡೆಸಿಕೊಳ್ಳಬಾರದು. ಈಗಾಗಲೇ ಆಯೋಗಕ್ಕೆ ಮಾಹಿತಿ ನೀಡಿದ್ದು ಲಿಂಗಾಯತ ಬೇಡ ಜಂಗಮರು ಎಸ್ಸಿ ಪಟ್ಟಿಯಲ್ಲಿ ಸೇರಿಸಬಾರದು ಎಂದರು.

ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ರಾಜ್ಯಸರ್ಕಾರ ಕ್ರಮಕ್ಕೆ ಮುಂದಾಗಬೇಕು. ಸಚಿವ ಸಂಪುಟದ ಸಭೆ ನಡೆಸಿ ಲಿಂಗಾಯತ ಬೇಡ ಜಂಗಮ ಜಾತಿಯವರನ್ನು ಎಸ್ಸಿ ಪಟ್ಟಿಗೆ ಸೇರಿದಂತೆ ಆದೇಶ ಹೊರಡಿಸಬೇಕು ಎಂದರು.

ಮತಾಂತರಗೊಂಡ ಸಮೂದಾಯ ಜನರು ಅದೇ ಧರ್ಮ ಪಾಲಿಸುವದಾದರೆ ಅಲ್ಲಿಯೇ ಇರಬೇಕು. ಮೀಸಲಾತಿ ದುರ್ಬಳಕೆಯಾಗದಂತೆ ಎಚ್ಚರವಹಿಸಬೇಕು ಎಂದರು. ಈ ಸಂದರ್ಬದಲ್ಲಿ ಎಂಎಲ್ಸಿ ಎ.ವಸಂತಕುಮಾರ, ಜಯಣ್ಣ, ಎಂ.ವಿರೂಪಾಕ್ಷಿ, ಅಂಬಣ್ಣ ಆರೋಲಿ, ಜೆ.ಬಿ.ರಾಜು, ಬಾಲಸ್ವಾಮಿ ಕೊಡ್ಲಿ, ರಾಮಣ್ಣ ಇರಬಗೇರಾ, ಎಚ್.ಬಿ.ಮುರಾರಿ, ನರಸಿಂಹಲು ಮಾಡಗಿರಿ, ಶೇಖರಪ್ಪ ಗಿಣಿವಾರ, ಆಂಜಿನೇಯ್ಯ ಕುರುಬದೊಡ್ಡಿ ಇದ್ದರು.