ವಿಜಯಪುರ:ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಅವರ ವರದಿಯನ್ನು ಪರಿಗಣಿಸಿ ಆ. 15 ರೊಳಗೆ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಾದಿಗರ ಸಂಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಹೇಳಿದರು.ಒಳ ಮೀಸಲಾತಿ ಜಾರಿಯಾಗುವಂತೆ ಸುಪ್ರೀಂ ಕೋರ್ಟ್ ಸಹ ನಿರ್ದೇಶನ ನೀಡಿದೆ.
ಅಷ್ಟಾದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತಿಲ್ಲ. ಅದರಿಂದಾಗಿ ಮಾದಿಗ ಜನಾಂಗಕ್ಕೆ ೂರ ಅನ್ಯಾಯ ಸರ್ಕಾರ ಮಾಡುತ್ತಿದೆ ಎಂದು ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸದ್ಯದ ಶೇ. 15 ರಷ್ಟು ಮೀಸಲಾತಿಯಲ್ಲಿ ಮಾದರ, ಸಮಗಾರ, ಡೋರ, ಮಚಗಾರ, ಸಮುದಾಯದವರಿಗೆ ಶೇ. 6 ರಷ್ಟು ಒಳ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು ಮಾಡಿದೆ. ಆದರೆ ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ಕೆಲವರು ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಅಂಥವರ ಮಾತಿಗೆ ಮುಖ್ಯಮಂತ್ರಿಗಳು ಕಿವಿ ಕೊಡದೆ ಒಳ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಬೇಕೆಂದು ಹೇಳಿದರು.ಒಳ ಮೀಸಲಾತಿ ಜಾರಿಗಾಗಿ ಕಳೆದ 40 ವರ್ಷಗಳಿಂದ ಹೋರಾಟ ನಡೆದಿದೆ.
ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಒಳಮೀಸಲಾತಿ ಜಾರಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಆದರೆ, ಸದ್ಯದ ಸರ್ಕಾರ ಸಮೀೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ. ಒಳ ಮೀಸಲಾತಿ ಜಾರಿಮಾಡುವುದಾಗಿ ಭರವಸೆ ನೀಡಿದ ಹೇಳಿದ ಸಿದ್ದರಾಮಯ್ಯನವರು ಈ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡಲು ವಿಳಂಬ ಮಾಡಿದರೆ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಚುಣಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಅಲ್ಲದೆ, ಸರ್ಕಾರದ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾದರೆ ಅವರ ವಿರುದ್ಧ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ಆ. 1 ರಂದು ರಾಜ್ಯವ್ಯಾಪಿ ಸಾಂಕೇತಿಕ ಹೋರಾಟ ನಡೆಸಲು ನಿರ್ಧರಿಸಲಾಗಿದ್ದು, ಆ. 11 ರಿಂದ ಹೋರಾಟ ಉಗ್ರ ರೂಪಕ್ಕೆ ತಾಳಲಿದೆ ಎಂದು ಎಚ್ಚರಿಕೆ ನೀಡಿದರು.
ನ್ಯಾಯವಾದಿ ಎಸ್.ಎಸ್. ಲೋಟಗೇರಿ, ಭೀಮು ಮೇಲಿನಮನಿ, ಸುರೇಶ ಗಚ್ಚಿನಮನಿ, ಪ್ರಧಾನಿ ಮೂಲಮನಿ, ಮದನಕುಮಾರ ನಾಗರದಿನ್ನಿ, ಸದಾನಂದ ಗುನ್ನಾಪುರ, ಪ್ರಭಾಕರ ಕೂಚಬಾಳ, ಎಂ.ಆರ್. ದೊಡ್ಡಮನಿ, ಅಯ್ಯಪ್ಪ ದೊಡ್ಡಮನಿ, ಬಾಲಚಂದ್ರ ಹುಲ್ಲೂರ, ವಿಠಲ ನಡುವಿನಕೇರಿ, ಬಾಳಪ್ಪ ಗೂಗಿಹಾಳ, ಕಿರಣ ಆಸಂಗಿ, ವೆಂಕಟೇಶ ರತ್ನಾಕರ, ಮಲ್ಲು ಶೇಷಗಿರಿ, ದೇವೇಂದ್ರ ಹಡಲಗಿ, ಶಿವು ಬಡಿಗೇರ, ಸುನೀಲ ಸಂದ್ರಿಮನಿ, ಶಿವಾನಂದ ತಿಕೋಟಕರ, ಪರಸು ಗುಣದಾಳ, ಅಮೀನಪ್ಪ ರೊಣಿಹಾಳ ಮತ್ತಿತರರಿದ್ದರು.
ವಿಜಯಪುರದ ಖಾಸಗಿ ಹೋಟೆಲ್ನಲ್ಲಿ ಜಿಲ್ಲಾ ಮಾದಿಗರ ಸಂಟನೆ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಶ್ರೀಶೈಲ ರತ್ನಾಕರ, ಎಸ್.ಎಸ್. ಲೋಟಗೇರಿ, ಭೀಮು ಮೇಲಿನಮನಿ ಮತ್ತಿತರರಿದ್ದಾರೆ.