ಮುಂಡರಗಿ: ಮುಂಡರಗಿ-ಹೂವಿನಹಡಗಲಿ ಮಾರ್ಗವಾಗಿ ಗದಗ-ಹರಪನಹಳ್ಳಿ ರೈಲು ಮಾರ್ಗ ನಿರ್ಮಿಸಬೇಕು ಎಂದು ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಕಾರ್ಯಕರ್ತರು ಮಂಗಳವಾರ ಪಟ್ಟಣದ ಅಂಚೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ನಡೆಸುವ ಮೂಲಕ ಅಂಚೆ ಕಚೇರಿಯ ವ್ಯವಸ್ಥಾಪಕಿ ಗೀತಾ ಗ್ರಾಮಪುರೋಹಿತ್ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, 2023ರ ಡಿ.9ರಂದು ಪಟ್ಟಣದಿಂದ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಡಿದ್ದು, ಡಿ.11 ರಂದು ದೆಹಲಿಯ ಜಂತರ ಮಂತರನಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವಿಶ್ವನಾಥ ತಾಮ್ರಗುಂಡಿ, ಸುಭಾಸ ಕುಂಬಾರ, ಬಸವರಾಜ ಕುಂಬಾರ, ಸುರೇಶ ಕುಂಬಾರ, ಮೈನುದ್ದಿನ್ ಗರಡಿಮನಿ, ಬಸಪ್ಪ ವಡ್ಡರ, ರಮೇಶ ರಾಮೇನಹಳ್ಳಿ, ತಪ್ಪೇಶ ರಾಯದುರ್ಗ, ಅರ್ಜುನ ಗುಡಿ, ಮಂಜುನಾಥ ದೊಡ್ಡಮನಿ, ಯಮನಪ್ಪ ಭಜಂತ್ರಿ, ದಾವಲ್‌ಮಲ್ಲಿಕ ಜಾಫರಸಾಬ, ಲೈಲಾಗಹುಸೇನ ಸೈಯದ ಇತರರು ಇದ್ದರು.