ಮದ್ದೂರು ಪಟ್ಟಣದ ಜೀವ ವಿಮಾ ಕಚೇರಿ ಎದುರು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ತಾಲೂಕು ಘಟಕದಿಂದ ಪ್ರತಿಭಟನೆ ನಡೆಯಿತು. ಗೊರವನಹಳ್ಳಿ ಕೃಷ್ಣೆಗೌಡ, ಶಿವಕುಮಾರ್, ಚಂದ್ರಶೇಖರ್, ಶಿವಲಿಂಗೆಗೌಡ, ಕೆ.ರಾಮಚಂದ್ರೇಗೌಡ, ಧೀರ್‌ಕುಮಾರ್, ಸಿ.ಕೆ.ಶಂಕರ್, ಜಯಶೀಲ, ನಾಗರಾಜಯ್ಯ ಇದ್ದರು.  
ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ತಾಲೂಕು ಘಟಕ ವತಿಯಿಂದ ಪಟ್ಟಣದ ಜೀವ ವಿಮಾ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಒಕ್ಕೂಟದ ತಾಲೂಕು ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಜೀವವಿಮಾ ಪ್ರತಿನಿಧಿಗಳಿಗೆ ನೀಡಲಾಗುತ್ತಿದ್ದ ಕಮಿಷನ್ ಕಡಿತಗೊಳಿಸಲಾಗಿದ್ದು ಅದನ್ನು ಹೆಚ್ಚಿಸಬೇಕು. ಜತೆಗೆ ಈ ಹಿಂದಿನ ಆಯೋಗದ ದರಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪಾಲಿಸಿದಾರರ ಬೋನಸ್ ದರವನ್ನು ಏರಿಸುವುದರ ಜತೆಗೆ 1 ಲಕ್ಷ ರೂ. ಮುಖಬೆಲೆಯ ಕನಿಷ್ಠ ವಿಮೆಯನ್ನು 2 ಲಕ್ಷ ರೂ.ಗೆ ಏರಿಕೆ ಮಾಡಿರುವುದನ್ನು ಮೊದಲಿನಂತೆ ಮರು ಸ್ಥಾಪಿಸಬೇಕು. ಅಲ್ಲದೇ, ಪ್ರೀಮಿಯಂ ದರವನ್ನು ಕಡಿಮೆ ಮಾಡುವುದರ ಜತೆಗೆ ಜಿಎಸ್‌ಟಿ ತೆಗೆದು ಹಾಕಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಶಿವಲಿಂಗೆಗೌಡ, ಗೌರವಾಧ್ಯಕ್ಷ ಕೆ.ರಾಮ ಚಂದ್ರೇಗೌಡ, ಪದಾಧಿಕಾರಿಗಳಾದ ಧೀರ್‌ಕುಮಾರ್, ಸಿ.ಕೆ.ಶಂಕರ್, ಜಯಶೀಲಾ, ನಾಗರಾಜಯ್ಯ, ಕೆಂಪೇಗೌಡ, ಮಮತಾ, ಬಸವಲಿಂಗೇಗೌಡ, ಮಯೂರ, ಶ್ರುತಿ, ನೇತ್ರಾವತಿ, ಶಶಿಕಲಾ, ಚನ್ನಪ್ಪ ಇತರರು ಇದ್ದರು.