ಜಿಲ್ಲೆ

ಸಮೀಕ್ಷೆ ಅವಧಿ ವಿಸ್ತರಣೆಗೆ ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯಕ್ಕೆ ನೀಡಿರುವ ಸಮಯ ಕಡಿಮೆಯಾಗಿದೆ. ಅಲ್ಪ ಅವಧಿಯಲ್ಲಿ ಸಂಪೂರ್ಣ ಸಮೀಕ್ಷೆ ಅಸಾಧ್ಯ. ಹೀಗಾಗಿ ಅವಧಿ ವಿಸ್ತರಿಸಬೇಕು ಎಂದು ಕೊರಮ ಸಮಾಜದ ಹಿತಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಭಜಂತ್ರಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಗಣತಿಗೆ ಸಮೀಕ್ಷೆದಾರರು ಮನೆಗೆ ಬಂದಾಗ ಕೊರಮ, ಕೊರಚ, ಕುಂಚಿ, ಕೊರವ ಹಾಗೂ ಭಜಂತ್ರಿ ಸಮಾಜದವರು ಕೊರಮ, ಕೊರಚ ಎಂದೇ ಬರೆಸಬೇಕು ಎಂದರು.

ಮೇ 5ರಿಂದ ಜಾತಿ ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಯ ಪಟ್ಟಿಯ ಜಾತಿಯ ಕಾಲಂನಲ್ಲಿ ನಮೂದಿಸಲು ಸ್ಪಷ್ಟವಾಗಿ ತಿಳಿಸಬೇಕು. ಉಪಜಾತಿಗಳಾದ ಕೊರವ, ಕೊರವರ್​, ಕೊರಚರ, ಕುಂಚಿ ಕೊರವ ಎಂಬುದನ್ನು ಜಾತಿಯ ಕಾಲಂನಲ್ಲಿ ನಮೂದಿಸಬಾರದು ಎಂದರು.

ಪರಿಶಿಷ್ಟ ಜಾತಿಯ 101 ಜಾತಿಗಳ ಮನೆ ಮನೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ಆಯೋಗದ ಪ್ರಶ್ನಾವಳಿಗೆ ಸರಿಯಾಗಿ ಉತ್ತರಿಸಬೇಕು. ಸಮೀಕ್ಷೆ ಮೂರು ಹಂತದಲ್ಲಿ ನಡೆಯುತ್ತಿದ್ದು, ಒಂದನೇ ಹಂತದಲ್ಲಿ ಭಾಗವಹಿಸದಿದ್ದರೆ ಮೇ 19 ರಿಂದ 21 ರವರೆಗೆ ಗ್ರಾಮ ಪಂಚಾಯಿತಿ ಹಾಗೂ ಮತಗಟ್ಟೆಯಲ್ಲಿ ತೆರಳಿ ಮಾಹಿತಿ ನೀಡಬೇಕು. ಆಯೋಗ ತಯಾರಿಸಿದ ಆ್ಯಪ್​ನಲ್ಲಿ ಸಹ ಮೇ 23ರವರೆಗೆ ಮಾಹಿತಿ ನೀಡಬಹುದು ಎಂದರು.

ಮಂಜುನಾಥ ಭಜಂತ್ರಿ, ಯಮನೂರ ಗುಡಿಯಾಳ, ಭೀಮಣ್ಣ ಹವೇಲಿ, ವೈ.ಬಿ. ಭಜಂತ್ರಿ, ಗುರುನಾಥ ಭಜಂತ್ರಿ, ಇತರರು ಇದ್ದರು.