ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಗೃಹ ಸಚಿವರು ಹುಬ್ಬಳ್ಳಿಯಲ್ಲಿ 3 ಪೊಲೀಸ್ ಠಾಣೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಜನಸೇವೆಗೆ ಮುಕ್ತಗೊಳಿಸಿದ್ದು ಸಂತಸ ತಂದಿದೆ. ಅದೇ ರೀತಿ ಧಾರವಾಡದಲ್ಲೂ ಹೆಚ್ಚುವರಿ ಪೊಲೀಸ್ ಠಾಣೆಗಳ ಸ್ಥಾಪನೆ ಮಾಡಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಈ ಮೂರು ಠಾಣೆಗಳ ನಿರ್ಮಾಣಕ್ಕೆ 2022ರ ಸೆ. 4ರಂದು ಶಂಕುಸ್ಥಾಪನೆ ನೆರವೇರಿಸಿ ವರ್ಷದೊಳಗೆ ಕಾಮಗಾರಿ ರ್ಪೂಣಗೊಳಿಸಲು ಸೂಚಿಸಿದ್ದರು. ಪೊಲೀಸ್ ಗೃಹ ಮಂಡಳಿ ಹೆಚ್ಚುವರಿ ಅವಧಿ ಪಡೆದು ಅಚ್ಚುಕಟ್ಟಾಗಿ ಕಟ್ಟಡ ಕಾಮಗಾರಿ ಅಚ್ಚುಕಟ್ಟಾಗಿ ರ್ಪೂಣಗೊಳಿಸಿದೆ. ಆದರೆ, ಚುನಾವಾಣೆ ನೀತಿ ಸಂಹಿತೆ ಸೇರಿ ವಿವಿಧ ಕಾರಣಗಳಿಂದ ತಡವಾಡಗಿದ್ದ ಉದ್ಘಾಟನೆ ಇಂದು ನೆರವೇರಿದ್ದು ಒಳ್ಳೆ ವಿಚಾರ.
ಈ ಠಾಣೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಸ್ವಂತ ಕಟ್ಟಡದ ಅಗತ್ಯತೆ ಹೆಚ್ಚಾಗಿತ್ತು. ಆದರೆ, ಠಾಣೆಗಳಿರುವ ಪ್ರದೇಶಗಳು ಜನ ನಿಬಿಡವಾಗಿದ್ದರಿಂದ, ಕಟ್ಟಡ ಸ್ಥಾಪನೆಗೆ ಸ್ಥಳದ ಅಭಾವ ಎದುರಾಗಿತ್ತು. ಎಲ್ಲ ಶಾಸಕರು, ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುತುವಜಿರ್ಯಿಂದ ಸ್ವಂತ ಕಟ್ಟಡ ನಿರ್ಮಾಣವಾಗಿವೆ ಎಂದು ತಮ್ಮ ಅಂದಿನ ಪ್ರಯತ್ನ ಸ್ಮರಿಸಿದ್ದಾರೆ.
ಅದಲ್ಲದೆ ಧಾರವಾಡದಲ್ಲಿ ಜನದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು, ನಗರದಲ್ಲಿ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಸುಧಾರಿಸಲು ಹೆಚ್ಚುವರಿ ಪೊಲೀಸ್ ಠಾಣೆಗಳ ಅಗತ್ಯವಿದೆ. ಕನಿಷ್ಠ ಒಂದೊಂದು ಹೆಚ್ಚುವರಿ ಸಂಚಾರಿ, ಮಹಿಳಾ ಹಾಗೂ ಸಾಮಾನ್ಯ ಪೊಲೀಸ್ ಠಾಣೆಗಳ ಸ್ಥಾಪನೆಯಾಗಬೇಕಿದೆ. ಈ ವಿಚಾರವಾಗಿ ಗೃಹಮಂತ್ರಿಗಳೊಂದಿಗೆ ಚಚಿರ್ಸಲಿದ್ದು, ಆದಷ್ಟು ಶ್ರೀ ಅನುಮೋದನೆ ನೀಡಬೇಕು ಎಂದು ಬೆಲ್ಲದ ಮನವಿ ಮಾಡಿದ್ದಾರೆ.