ಇಂಡಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಸಂಸ, ಡಾ.ಬಿ.ಆರ್ ಅಂಬೇಡ್ಕರ ಅನುಯಾಯಿಗಳು ಹಾಗೂ ವಿವಿಧ ಪ್ರಗತಿಪರ ಸಂಟನೆಗಳ ಕಾರ್ಯಕರ್ತರು ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವಿವಿಧ ಸಂಟನೆಗಳ ಮುಖಂಡರಾದ ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಸೋಮು ಮ್ಯಾಕೇರಿ, ರಮೇಶ ನಿಂಬಾಳ ಮಾತನಾಡಿ, ವಿಶ್ವ ರತ್ನ ಡಾ. ಬಿ.ಆರ್ ಅಂಬೇಡ್ಕರವರ ಕುರಿತು ಕೇಂದ್ರ ಸಚಿವ ಅಮೀತ ಶಾ ಲುವಾಗಿ ಮಾತನಾಡಿರುವುದು ಇಡೀ ಮಾನವ ಕುಲ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಜಟ್ಟೆಪ್ಪ ರವಳಿ, ನಿರ್ಮಲಾ ತಳಕೇರಿ, ಇಲಿಯಾಸ ಬೋರಮಣಿ, ಜಾವೀದ ಮೋಮಿನ್, ಲಿಂಬಾಜಿ ರಾಠೋಡ, ಪ್ರಕಾಶ ಪ್ಯಾಟಿ, ಶೆಲಜಾ ರಾಠೋಡ, ರವಿ ಹೊಸಮನಿ, ವಿಕಾಸ ಹೊಸಮನಿ, ತುಕಾರಾಮ ಗುನ್ನಾಪೂರ, ಭೀಮಾಶಂಕರ ಮೂರಮನ್, ವೇಂಕಪ್ಪ ಕಟ್ಟಿಮನಿ, ಶೇಖರ ಶಿವಶರಣ,ಮಲ್ಲು ಮಡ್ಡಿಮನಿ, ನಾಗೇಶ ತಳಕೇರಿ, ಬಾಬು ಗುಡಮಿ, ಪಾಪು ಕಿತಲಿ,ಮೀಲಿಂದ ಹೊಸಮನಿ, ಕಲ್ಲಪ್ಪ ಅಂಜುಟಗಿ,ಧರ್ಮರಾಜ ಸಾಲೋಟಗಿ, ಸಂತೋಷ ಪರೇಶನವರ್ಪಾಲ್ಗೊಂಡಿದ್ದರು.