ವಿಜಯಪುರ: ಸೇವೆ ಕಾಯಂ ಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರ ಸೋಮವಾರ 26 ದಿನಕ್ಕೆ ಕಾಲಿರಿಸಿದ್ದು, ಲಟ್ಟಣಿಗೆ ಪ್ರದರ್ಶಿಸುವ ಮೂಲಕ ವಿನೂತನವಾಗಿ ಸರ್ಕಾರದ ಗಮನ ಸೆಳೆದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಹೊರಾವರಣದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಉಪನ್ಯಾಸಕಿಯರು ಲಟ್ಟಣಿಗೆ ಹಿಡಿದು ಘೋಷಣೆ ಮೊಳಗಿಸಿದರು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕಳೆದ 26 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈವರೆಗೂ ಸ್ಪಂದಿಸಿಲ್ಲ. ಜನಪ್ರತಿನಿಧಿಗಳಿಗೆ ಅತಿಥಿ ಉಪನ್ಯಾಸಕರ ಕೂಗು ಕೇಳಿಸುತ್ತಿಲ್ಲವೆಂದರೆ ಇದು ವ್ಯವಸ್ಥೆಯ ದುರಂತವೇ ಸರಿ ಎಂದರು.
ಡಾ.ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಆರ್.ಎಲ್. ಕಡೇಮನಿ, ಡಾ.ರೇಣುಕಾ ಹೆಬ್ಬಾಳ, ಡಾ.ಡಿ.ಬಿ. ಕುಲಕರ್ಣಿ, ಶ್ರೀಶೈಲ ಹೆಬ್ಬಿ, ಡಾ.ಆರ್.ಕೆ. ತೇಲಿ, ಮಹೇಶ ಕಲ್ಲೂರ, ಶಿವಾನಂದ ಸಿಂಹಾಸನಮಠ, ಲೀಲಾ ಲಕ್ಕಣ್ಣವರ, ಡಾ. ಅಶೋಕ ಬಿರಾದಾರ, ಡಾ. ಸುರೇಶ ಬಿರಾದಾರ, ಡಾ.ಎ.ಬಿ. ಬಗಲಿ, ಜಿ.ಆರ್. ರಾಠೋಡ, ಜಯಶ್ರೀ ಸಾಲಿಮಠ, ಆರ್.ಬಿ. ನಾಗರಡ್ಡಿ, ಎಸ್.ಐ. ಯಂಭತ್ತನಾಳ, ಎಸ್.ಬಿ. ಪೂಜಾರಿ, ಆರ್.ಜಿ. ಕಳ್ಳಿ, ವಿಜಯಲಕ್ಷ್ಮೀ ಪಾಟೀಲ, ಮಹಾನಂದ ಎಸ್.ಎಚ್, ತೇಜಸ್ವಿನಿ ಕೊರೆಗೊಳ ಮತ್ತಿತರರಿದ್ದರು.