ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಗೆ ಮನವಿ ಸಲ್ಲಿಸಿದ ನಾಗರಿಕರು. 
ಜಿಲ್ಲೆ

ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಡಿಮಾಂಡ್

ಶಿವಮೊಗ್ಗ: ಹೊಳೆಹೊನ್ನೂರು ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ 14ನೇ ವಾರ್ಡ್‌ನ ನಿವಾಸಿಗಳು ಸ್ಥಳೀಯ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡರ ನೇತೃತ್ವದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ರೈಲ್ವೆ ಮೇಲ್ಸುತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಹಲವು ವರ್ಷಗಳಿಂದ ವಾಹನ ದಟ್ಟನೆ ಸಮಸ್ಯೆಯಿಂದ ಬೇಸತ್ತಿದ್ದ ನಾಗರಿಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದರೆ 14ನೇ ವಾರ್ಡ್‌ನ ಸಿದ್ದೇಶ್ವರನಗರ, ಚಿಕ್ಕಲ್, ಶಾಂತಮ್ಮ ಬಡಾವಣೆ, ಕೋರಿ ರುದ್ರಪ್ಪ ಬಡಾವಣೆ, ಹೊಳೆಹೊನ್ನೂರು ರಸ್ತೆ ಸಮೀಪದ ಎಲ್ಲ ನಾಗರಿಕರಿಗೆ ದಿನನಿತ್ಯದ ಸಂಚಾರಕ್ಕೆ ಅನುಕೂಲವಾಗುವಂತೆ ಅಂಡರ್ ಪಾಸ್ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದರು. ಮುಖಂಡರಾದ ರಂಗೇಗೌಡ, ಚಂದ್ರಪ್ಪ, ಸಿದ್ದಣ್ಣ, ಕಾರ್ತಿಕ್, ಅಯಾಜ್ ಖಾನ್, ದೇವರಾಜ್, ರಾಜು ಉಪಸ್ಥಿತರಿದ್ದರು.