raichur 
ಜಿಲ್ಲೆ

ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಒತ್ತಾಯ

 ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ಸರ್ಕಾರಿ ಸ್ಥಳದಲ್ಲಿ ಖಾಸಗಿಯೊಬ್ಬರು ನಿರ್ಮಾಣ ಮಾಡಿಕೊಂಡ ಶೇಡ್‌ನ್ನು ಎರಡು ದಿನದಲ್ಲಿ ತೆರವುಗೊಳಿಸಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡದಿದ್ದರೆ, ಖಾಲಿ ಲೋಟಾಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಕಾಲ್ಮಾಡಿಗೆ ಜಾಥಾ ನಡೆಸಲಾಗುತ್ತದೆ ಎಂದು ಕರ್ನಾಟಕ ಜನಶಕ್ತಿ ಮತ್ತು ಸ್ತ್ರೀ ಶಕ್ತಿ, ಕೂಲಿಕಾರರ ಸಂಘದ ಸಂಚಾಲಕಿ ವಿದ್ಯಾಪಾಟೀಲ್ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಹೌಸಿಂಗ್ ಬೋರ್ಡ್‌ಗೆ ಸೇರಿ ಸರ್ಕಾರಿ ಜಮೀನನಲ್ಲಿ ಸುಮಾರು ದಿನಗಳಿಂದ ಮಹಿಳೆಯರು ಶೌಚಾಲಯಕ್ಕೆ ಬಳಸುತ್ತಿದ್ದಾರೆ. ಇತ್ತೀಚಿಗೆ ಗ್ರಾಮದ ಕೆಲವರು ಸರ್ಕಾರಿ ಭೂಮಿಯಲ್ಲಿ ಶೆಡ್ ನಿರ್ಮಿಸಿ ಒತ್ತುವರಿ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ಕೂಡಲೇ ತೆರವಿಗೆ ಮುಂದಾಗದ ಹೋದದಲ್ಲಿ ಜೇಗರಕಲ್ ಗ್ರಾಮದಿಂದ ಡಿಸಿ ಕಚೇರಿಯವರಗೆ ಕಾಲ್ನಡಿಗೆ ಜಾಥಾ ನಡೆಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಆಂಜಿನಯ್ಯ ಕುರುಬದೊಡ್ಡಿ, ಜಿಂದಮ್ಮ, ಲಕ್ಷ್ಮೀ, ಅಂಗಡಿ ಜಿಂದಮ್ಮ, ಶಾಂಭವಿ, ಬಂಗಾರಿ ನರಸಿಂಹಲು, ಮಹೇಂದ್ರ ಗಾಜರಾಳ, ನರಸಪ್ಪ ಇದ್ದರು.