ನೆಲಮಂಗಲ : ರಾ.ಹೆದ್ದಾರಿ 48ರ ಬೂದಿಹಾಲ್ ಗೇಟ್ ಬಳಿ ಅಂಡರ್ಪಾಸ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬೂದಿಹಾಲ್ ಗೇಟ್ಬಳಿ ಮಂಗಳವಾರ ಬೆಳಗ್ಗೆ ಸಮಾವೇಶಗೊಂಡ ಬೂದಿಹಾಲ್ ಗ್ರಾಪಂ ವ್ಯಾಪ್ತಿಯ ನೂರಾರು ಜನ, ಹೆದ್ದಾರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡುತ್ತಿದ್ದು, ಇದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಹೀಗಾಗಿ ಬೃಹತ್ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ತಾಲೂಕು ಒಕ್ಕಲಿಗರ ಸಂದ ಅಧ್ಯಕ್ಷ ಬಿ.ಕೆ.ತಿಮ್ಮರಾಜು ಮಾತನಾಡಿ, ಬೂದಿಹಾಲ್ ಗೇಟ್ ಮೂಲಕ 120ಕ್ಕೂ ಅಂತಾರಾಷ್ಟ್ರೀಯ ಕೈಗಾರಿಕೆಗಳಿಗೆ, 200ಎಕರೆ ಪ್ರದೇಶದ ಗೃಹ ಮಂಡಳಿ ಬಡಾವಣೆ ನಿರ್ಮಿಸಿದೆ. ರಾಜಾಜಿ ನಗರ ಹೌಸಿಂಗ್ನಿಂದ 65 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಾಣ ಸೇರಿ 80ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಕಿರಿದಾದ ಅಂಡರ್ ಪಾಸ್ ನಿರ್ಮಾಣದಿಂದ ಸಮಸ್ಯೆಯಾಗುತ್ತದೆ. ಹೀಗಾಗಿ ಬೃಹತ್ ಗಾತ್ರದ ಅಂಡರ್ ಪಾಸ್ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರು. ಗ್ರಾಮಸ್ಥರ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಭಿಯಂತ ಬೀರೇಶ್ವರ್ ತಿಳಿಸಿದರು.
ಗ್ರಾಪಂ ಅಧ್ಯೆ ಶೈಲಜಾ ಮಂಜುನಾಥ್, ಕುವೆಂಪು ಬ್ಯಾಂಕ್ ಅಧ್ಯಕ್ಷ ಬಿ.ಕೆ.ನಟರಾಜು, ಒಕ್ಕಲಿಗ ೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಜಿಲ್ಲಾ ಕೆಡಿಪಿ ಸದಸ್ಯ ನಾರಾಯಣ್ಗೌಡ, ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ಮುಖಂಡ ಬೂದಿಹಾಲ್ ಮಧುಕುಮಾರ್, ಟಿ.ತಿಮ್ಮೇಗೌಡ, ಕೆಂಪಯ್ಯ, ಪುರುಷೋತ್ತಮ್ಗೌಡ, ಬೂದಿಹಾಲ್ ಕಿಟ್ಟಿ, ವೇಣು, ಮನು, ಬೈರೇಗೌಡ, ಮಾರಪ್ಪ ಇದ್ದರು.