ಲಕ್ಷೆ್ಮೕಶ್ವರ: ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಇಎಸ್ಐ ಪಡೆಯದ ನರೇಗಾ ಸಿಬ್ಬಂದಿಗೆ ಸಾಮೂಹಿಕ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ಬೇರ್ ಪ್ಯೂಟ್ ಟೆಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದಿಂದ ಜಿಪಂ ಸಿಇಒ ಭರತ್ ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 8 ವರ್ಷಗಳಿಂದ ಬೇರ್ ಫೂಟ್ ಟೆಕ್ನಿಷಿಯನ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮೊದಲು 5ರಿಂದ 8 ಪಂಚಾಯಿತಿಗಳಲ್ಲಿ ಹಾಗೂ ಪ್ರಸ್ತುತ 3-4 ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಪ್ರತಿನಿತ್ಯ 50-100 ಕಿ.ಮೀ ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುತ್ತೇವೆ. ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು, ಬಿಎಫ್ಟಿ ಸಿಬ್ಬಂದಿಗೆ ಸಾಮೂಹಿಕ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಬದಲಾಗುತ್ತಿರುವ ವಾತಾರಣದಲ್ಲಿ ನಿತ್ಯವೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಈ ನಿಟ್ಟಿ ನಲ್ಲಿ ಬಿಎಪ್ಪಿ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.
ಗದಗ ಜಿಲ್ಲೆಯ ಬಿಎಫ್ಟಿ ಕ್ಷೇಮಾಭಿವೃದ್ಧಿ ಸಂಘದ ಕಿರಣ ಕುಮಾರ ಮೇಗೂರ, ಅಶೋಕ ಕಂಬಳಿ, ಮಲ್ಲಪ್ಪ ಮುಗಳಿ, ಪ್ರಕಾಶ ಅಂಬಕ್ಕಿ, ಶಂಭಯ್ಯ ಡಂಬಳಮಠ, ಸತೀಶ ಅರಿಶಿಣದ, ಪುಷ್ಪಾ ಬಡಿಗೇರ, ರವಿ ಹೊಂಬಳ, ಚನ್ನಬಸಗೌಡ ಮಲಗೌಡ್ರ, ಇತರರಿದ್ದರು.