ವೃಂದ ಮತ್ತು ನೇಮಕಾತಿ ನಿಯಮಗಳ ಬದಲಾವಣೆಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಗಿರೀಶ ಸ್ವಾದಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ಬಾಗೇನ್ನವರ, ತಾಲೂಕು ಅಧ್ಯಕ್ಷ ಅರ್ಜುನ ಕಾಖಂಡಕಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ ಇತರರಿದ್ದರು. 
ಜಿಲ್ಲೆ

ವೃಂದ ನೇಮಕಾತಿ ನಿಯಮಗಳ ಬದಲಿಕೆಗೆ ಆಗ್ರಹ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ-ಬನಹಟ್ಟಿ: ವೃಂದ ಮತ್ತು ನೇಮಕಾತಿ ನಿಯಮಗಳ ಬದಲಾವಣೆಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಬಸವರಾಜ ಬಾಗೇನ್ನವರ ನೇತೃತ್ವ ವಹಿಸಿ, 2017ರ ವರೆಗೆ ನೇಮಕಗೊಂಡ ಶಿಕ್ಷಕರನ್ನು 1ರಿಂದ 7ಕ್ಕೆ ನೇಮಕಗೊಂಡ ಶಿಕ್ಷಕರೆಂದು ಪರಿಗಣಿಸಿ ಹೊಸವೃಂದ ಮತ್ತು ನೇಮಕಾತಿ ನಿಯಮಗಳು 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ 2017ರ ನಂತರ ನೇಮಕಗೊಂಡವರಿಗೆ ಅನ್ವಯಿಸಬಾರದು. 2016ಕ್ಕಿಂತ ಮುಂಚೆ ನೇಮಕಗೊಂಡ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ. ಕಾರ್ಯಾದೇಶ ಹೊರಡಿಸಿ ಪಿಎಸ್‌ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿದ್ದನ್ನು ಹಿಂಪಡೆಯಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಪೂರ್ವ ನೇಮಕಗೊಂಡ ಎಲ್ಲ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಪ್ರೌಢಶಾಲೆಗಳಿಗೆ ಬಡ್ತಿ ನೀಡಬೇಕು.

ಮುಖ್ಯಶಿಕ್ಷಕರ ಹದ್ದೆಗೆ ಸೇವಾಜೇಷ್ಠತೆ ಮೇಲೆ ಈ ಪೂರ್ವದಂತೆ ಬಡ್ತಿ ನೀಡಬೇಕು. ಇದಕ್ಕೂ ಪೂರ್ವ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜೇಷ್ಠತೆಯ ರಕ್ಷಣೆಯೊಡನೆ ಬಡ್ತಿ ನೀಡಬೇಕೆಂದು ತಿಳಿಸಿದರು.

ನೈಸರ್ಗಿಕ ನ್ಯಾಯ ಪರಿಕಲ್ಪನೆಯಡಿ ಶಿಕ್ಷಕರ ಬೇಡಿಕೆಗೆ ಮನ್ನಣೆ ನೀಡಲು ಸಂಘದ ಪ್ರಮುಖರು ಶಾಸಕ ಸಿದ್ದು ಸವದಿಯವರಿಗೂ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಅರ್ಜುನ ಕಾಖಂಡಕಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ವಿಜಯಕುಮಾರ ಹಲಕುರ್ಕಿ, ಆರ್.ವಿ. ಲಮಾಣಿ, ಅರುಣ ಕುಲಕರ್ಣಿ, ಎಂ.ಎಚ್. ಲಾಡಖಾನ, ಎಂ.ಎಸ್. ಕೊಯಿಮುತ್ತೂರ, ಎಲ್.ಎಸ್. ಹಂಜಗಿ, ಪ್ರಶಾಂತ ಹೊಸಮನಿ, ಮಲ್ಲಿಕಾರ್ಜುನ ಗಡೆಣ್ಣವರ, ಶೈಲಾ ಮಿರ್ಜಿ, ಆರ್.ಬಿ. ಧುತ್ತರಗಾವಿ, ಜಿ.ಎಸ್. ಕುಲಕರ್ಣಿ, ಜಯಶ್ರೀ ಕಟ್ಟಿಮನಿ, ಎ.ಜಿ. ಕಡ್ಲಿ, ಬಸವರಾಜ ಮುಧೋಳ, ಐ.ಎ. ಡಾಂಗೆ, ಜಿ.ಐ. ಹತ್ತಳ್ಳಿ, ಶಿವಕುಮಾರ ಕೊಟಕನೂರ, ಜಗದೀಶ ಕುಲ್ಲಳ್ಳಿ, ವಿ.ಸಿ. ಹಿರೇಮಠ, ಆರ್.ಎಸ್. ಝಳಕಿ ಇತರರಿದ್ದರು.