ಜಿಲ್ಲೆ

ಶ್ರೀ ಕಾಲಬೈರವೇಶ್ವರ ಜಯಂತ್ಯುತ್ಸವ ಆಚರಣೆಗೆ ಆಗ್ರಹ

ಚಿತ್ರದುರ್ಗ: ನಾಥಪಂಥದ ಆರಾಧ್ಯದೈವ ಶ್ರೀ ಕಾಲಬೈರವೇಶ್ವರ ಸ್ವಾಮಿ ಜಯಂತ್ಯುತ್ಸವವನ್ನು ಸರ್ಕಾರದಿಂದ ಆಚರಿಸಬೇಕೆಂದು ರಾಜ್ಯಸರ್ಕಾರ ವನ್ನು ಒತ್ತಾಯಿಸಿ ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.

ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ಭಾರತದ ವಿವಿಧೆಡೆ ನಾಥಪಂಥದ ಜೋಗಿ ಸಮುದಾಯ ಹರಡಿದೆ.
ಈ ಪರಂಪರೆಯ ಗುರುಗಳಾದ ಮಶ್ಚೇಂದ್ರನಾಥರು,ಗೋರಕ್ಷನಾಥರು ದೇಶಾದ್ಯಂತ ಸಾವಿರಾರು ಮಠ,ದೇವಾಲಯಗಳನ್ನು ಕಟ್ಟಿ ನಾಥ ಸಂಪ್ರದಾಯವನ್ನು ಎತ್ತಿ ಹಿಡಿದಿದ್ದಾರೆ. ಅನಾದಿ ಕಾಲದಿಂದಲೂ ಈ ಪಂಥದ ಗುರುಗಳು ಯೋಗ,ಆಯುರ್ವೇದ ಶಿಕ್ಷಣದೊಂ ದಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದಾರೆ.

ಚಿತ್ರದುರ್ಗದ ಜೋಗಿಮಟ್ಟಿ ಬೆಟ್ಟದಲ್ಲೂ ಮಶ್ಚೇಂದ್ರನಾಥರ ಗುದ್ದುಗೆ ಇದೆ. ಇದರೊಂದಿಗೆ ಜಿಲ್ಲೆಯ ವಿವಿಧೆಡೆಯೂ ನಾನಾ ದೇ ವಾಲಯಗಳಿವೆ. ಶ್ರೀ ಕಾಲ ಭೈರವೇಶ್ವರ ಸ್ವಾಮಿ ಜಯಂತ್ಯುತ್ಸವವನ್ನು ಶತಮಾನಗಳಿಂದಲೂ ಜೋಗಿ ಸಮುದಾಯ ಆಚರಿಸುತ್ತಾ ಬಂ ದಿದೆ. ಈ ಜಯಂತಿ ಸರ್ಕಾರದಿಂದ ಆಚರಿಸುವುದರ ಜತೆಗೆ ಸಮುದಾಯದ ಅಭಿವೃದ್ಧಿಗೂ ಕಾರ‌್ಯಕ್ರಮಗಳನ್ನು ರೂಪಿಸುವಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ. ಸಮುದಾಯದ ಒ.ಪ್ರತಾಪ್ ಜೋಗಿ, ಮಂಜುನಾಥ್ ಜೋಗಿ,ಮಧುಜೋಗಿ,ಗಿರೀಶ್‌ಜೋಗಿ,ಸಿದ್ದರಾಜ್ ಜೋಗಿ,ಜಗದೀಶ್ ಜೋಗಿ,ನಟರಾಜ್ ಜೋಗಿ, ತೇಜುಜೋಗಿ ಮತ್ತಿತರರು ಇದ್ದರು.