filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಬ್ಯಾಂಕ್​ ಸೌಲಭ್ಯ ಒದಗಿಸಲು ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ರಾಮದಲ್ಲಿ ಬ್ಯಾಂಕ್​ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ರಾಮಾಪುರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.

ರಾಮಾಪುರ ಗ್ರಾಮ ಧಾರವಾಡದಿಂದ 18 ಕಿ.ಮೀ ದೂರ, ಮಂಡಿಹಾಳ ಹಾಗೂ ಹೊಸ ತೇಗೂರ ಗ್ರಾಮಗಳ ಮಧ್ಯದಲ್ಲಿದೆ. ಮಂಡಿಹಾಳ ಮತ್ತು ಹೊಸತೇಗೂರ ನಡುವಿನ 12 ಕಿ.ಮೀ ಅಂತರದಲ್ಲಿ ವರವಿ ನಾಗಲಾವಿ, ನಾಗಲಾವಿ ಸ್ಟೇಶನ್​, ರಾಮಾಪುರ, ವೀರಾಪುರ, ಹೊಸವಾಳ, ಸಿದ್ದಾಪುರ, ಮದಿಕೊಪ್ಪ ಗ್ರಾಮಗಳು ಸೇರಿ ಇತರ ಸಣ್ಣ ಜನವಸತಿ ಸಹ ಇದೆ. ಆದಾಗ್ಯೂ ಬ್ಯಾಂಕ್​ ಸೌಲಭ್ಯ ಇಲ್ಲ.

ರಾಮಾಪುರ ಸೇರಿ ಸುತ್ತಲಿನ ಗ್ರಾಮಗಳ ಜನರು ಮುಖ್ಯವಾಗಿ ಕೃಷಿ ನಂಬಿದ್ದಾರೆ. ಸಣ್ಣಪುಟ್ಟ ಕಸಬುಗಳ ಮೂಲಕ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್​ ಸೌಲಭ್ಯ ಅಗತ್ಯ ಎನಿಸಿದೆ. ರೈತರ ಕೃಷಿ ಸಾಲ ಮತ್ತಿತರ ಹಣಕಾಸಿನ ವಹಿವಾಟು, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನಗಳನ್ನು ಪಡೆಯಲು ಫಲಾನುಭವಿಗಳು ಬ್ಯಾಂಕ್​ಗಳನ್ನೇ ಅವವಲಂಬಿಸಿದ್ದಾರೆ. ಆದರೆ ಈ ಗ್ರಾಮಗಳಲ್ಲಿ ಬ್ಯಾಂಕ್​ ಸೌಲಭ್ಯವಿಲ್ಲ. ಬ್ಯಾಂಕ್​ ಸೌಲಭ್ಯಕ್ಕೆ ಸುಮಾರು 8 ಕಿಮೀ ದೂರದ ಕೋಟೂರ ಅಥವಾ 9 ಕಿ.ಮೀ ದೂರದ ಮುಗದ ಗ್ರಾಮಕ್ಕೆ ತೆರಳಬೇಕು. ಇದು ಗ್ರಾಮಸ್ಥರಿಗೆ ಕಷ್ಟಕರವಾಗಿದೆ. ರಾಮಾಪುರ ಗ್ರಾಮಕ್ಕೆ ಬ್ಯಾಂಕ್​ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸುತ್ತಲಿನ ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.

ನಂತರ ಉಪ ತಹಸೀಲ್ದಾರ ಡಿ.ಎನ್​.ಕಸಮಳಗಿ ಅವರಿಗೆ ಮನವಿ ಸಲ್ಲಿಸಿದರು. ಹಿರಿಯರಾದ ಶಾಂತವೀರಯ್ಯ ಹಿರೇಮಠ, ಗ್ರಾಪಂ ಸದಸ್ಯರಾದ ಶಂಭನಗೌಡ ಪಾಟೀಲ, ಈರನಗೌಡ ಪಾಟೀಲ, ಮಂಜುನಾಥ ಪಾಟೀಲ, ಗಾಮಣ್ಣ ಅಂಬಲಿ, ಬಸಯ್ಯ ಹಿರೇಮಠ, ಬಸವರಾಜ ಮುಳಮುತ್ತಲ, ಮಡೆಪ್ಪ ಶೀಗಿಹಳ್ಳಿ, ಮಡೆಪ್ಪ ಪವಾರ, ವಾಸು ಪಾಟೀಲ, ನಾಗಪ್ಪ ಧಾರವಾಡ, ಭಾಸ್ಕರ ಬಡಿಗೇರ, ಸುರೇಗೌಡ ಪಾಟೀಲ ಇತರರಿದ್ದರು.