ಜಿಲ್ಲೆ

ಹಿರೇಕೆರೂರ ತಾಪಂ ವಾಣಿಜ್ಯ ಮಳಿಗೆ ಹರಾಜಿಗೆ ಒತ್ತಾಯ

ಹಿರೇಕೆರೂರ: ಪಟ್ಟಣದ ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡುವಂತೆ ಒತ್ತಾಯಿಸಿ ಸ್ಥಳೀಯರು ತಾಪಂ ಸಹಾಯಕ ನಿರ್ದೇಶಕ ನಾಗರಾಜ ಹಡಗಲಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖಂಡ ಮಾಲತೇಶ ಬೆಟಕೇರೂರ ಮಾತನಾಡಿ, ತಾಪಂಗೆ ಸಂಬಂಧಿಸಿದ ಒಟ್ಟು 19 ವಾಣಿಜ್ಯ ಮಳಿಗೆಗಳಿದ್ದು, ಅವುಗಳನ್ನು 23 ವರ್ಷಗಳಿಂದ ಹರಾಜು ಮಾಡಿಲ್ಲ. ಇದರಲ್ಲಿ ಮೂಲ ಮಾಲೀಕರು ಕೂಡ ಯಾವುದೇ ವ್ಯಾಪಾರ ವಹಿವಾಟು ನಡೆಸದೆ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆಗೆ ನೀಡಿ ವೈಯಕ್ತಿಕವಾಗಿ ಲಾಭಗಳಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಈ ಬಗ್ಗೆ ‘ವಿಜಯವಾಣಿ’ ಯಲ್ಲಿ ಡಿ. 26ರಂದು ವರದಿ ಕೂಡ ಪ್ರಕಟವಾಗಿದೆ. ಕೂಡಲೇ ಈ ಬಗ್ಗೆ ಪರೀಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ ಶಿವನಕ್ಕನವರ, ಮಾರುತಿ ಟಿ., ಕಾರ್ತಿಕ ಕೆ.ಸಿ. ಇದ್ದರು.