ಜಿಲ್ಲೆ

ಪ್ರತ್ಯೇಕ ಆಯುಕ್ತರ ನೇಮಕಕ್ಕೆ ಆಗ್ರಹ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡದ ಉದ್ದೇಶಿತ ಮಹಾನಗರ ಪಾಲಿಕೆಗೆ ಶೀಘ್ರವೇ ರಾಜ್ಯ ಸರ್ಕಾರ ವಿಶೇಷ ಆಯುಕ್ತರನ್ನು ನೇಮಕ ಮಾಡಬೇಕು. ಪ್ರಸ್ತುತ ಬಜೆಟ್​ನಲ್ಲಿ ಪ್ರತ್ಯೇಕ ಪಾಲಿಕೆಗೆ ವಿಶೇಷ ಅನುದಾನ ಮೀಸಲಿಡುವಂತೆ ಆಗ್ರಹಿಸಲು ನಿರ್ಧರಿಸಲಾಯಿತು.

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಗಣ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಧಾರವಾಡದ ಪಾಲಿಕೆಗೆ ವಿಶೇಷ ಆಯುಕ್ತರನ್ನು ಸುಗ್ರೀವಾಜ್ಞೆ ಇಲ್ಲವೇ ಬೇರೊಂದು ವಿಶೇಷ ಆದೇಶದ ಮೂಲಕ ನೇಮಕಾತಿ ಮಾಡಬೇಕು. ಅವರು ಹೊಸ ಪಾಲಿಕೆ ಸ್ವರೂಪದ ಬಗ್ಗೆ ಸರ್ಕಾರ ನಿರ್ಧರಿಸುವ ಅವಧಿಯೊಳಗೆ ಕಾರ್ಯ ಮುಗಿಸಿದರೆ ಪಾಲಿಕೆಗೆ ಇರುವ ಹಲವಾರು ಅಡೆತಡೆಗಳು ನಿವಾರಣೆ ಆಗಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತವಾದವು.

ರಾಜ್ಯ ಲೊಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ ತಲ್ಲೂರ ಮಾತನಾಡಿ, ಪಾಲಿಕೆಗಳ ಸ್ವರೂಪ ಮತ್ತು ಅನುದಾನ ನೀಡಿಕೆಯ ವಿಷಯವಾಗಿ ತಿಳಿವಳಿಕೆ ನೀಡಿದರು.

ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್​ ಮುಖಂಡರಾದ ಶಿವಲೀಲಾ ಕುಲಕರ್ಣಿ, ದೀಪಕ ಚಿಂಚೋರೆ, ನಾಗರಾಜ ಗೌರಿ, ಸಂತೋಷ ನೀರಲಕಟ್ಟಿ, ವೇದಿಕೆ ಪದಾಧಿಕಾರಿಗಳಾದ ಲಿಂಗರಾಜ ಸರದೇಸಾಯಿ, ಎಸ್​.ಎನ್​. ಕುಲಕರ್ಣಿ, ಎಸ್​.ಎಚ್​. ಮಿಟ್ಟಲಕೋಡ, ಎಂ.ವಿ. ವಡ್ಡೀನ, ಎಸ್​.ಬಿ ಗುತ್ತಲ, ಡಾ. ಪಿ.ಎ. ಪೊಲೀಸ್​ಪಾಟೀಲ, ಎಸ್​.ಜಿ ಹಿರೇಮಠ, ಎಂ.ಬಿ. ಕಟ್ಟಿ, ಇತರರು ಇದ್ದರು.

ಜಿ.ಎಸ್​. ಬ್ಯಾಡಗಿ ಸ್ವಾಗತಿಸಿದರು.