ದೊಡ್ಡಬಳ್ಳಾಪುರದ ಕೆಪಿಟಿಸಿಎಲ್​ ಕಚೇರಿ ಮುಂದೆ ರೈತರು ಸಮರ್ಪಕ ವಿದ್ಯುತ್​ ಪೂರೈಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರೈತ ಸಂದ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲೂಕು ಟಕದ ಪ್ರಧಾನ ಕಾರ್ಯದರ್ಶಿ ಸತೀಶ್​, ತೂಬಗೆರೆ ಹೋಬಳಿ ಅಧ್ಯಕ್ಷ ಮುನಿನಾರಾಯಣಪ್ಪ, ವಾಸು, ಹನುಮಂತರಾಯಪ್ಪ ಇತರರು ಇದ್ದರು. 
ಜಿಲ್ಲೆ

ಸಮರ್ಪಕ ವಿದ್ಯುತ್​ ಪೂರೈಕೆಗೆ ಪಟ್ಟು

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ರೈತರ ಪಂಪ್​ ಸೆಟ್​ಗಳಿಗೆ ಸಮರ್ಪಕ ವಿದ್ಯುತ್​ ಪೂರೈಸುವಂತೆ ಒತ್ತಾಯಿಸಿ ರೈತ ಸಂದಿಂದ ಬುಧವಾರ ನಗರದ ಕೆಪಿಟಿಸಿಎಲ್​ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ರೈತರಿಗೆ 7 ಗಂಟೆ 3 ಫೇಸ್​ ವಿದ್ಯುತ್​ ಪೂರೈಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಕೆಪಿಟಿಸಿಎಲ್​ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್​ ಪೂರೈಕೆ ಮಾಡುತ್ತಿಲ್ಲ. 15 ದಿನಗಳಿಂದ ವಿದ್ಯುತ್​ ವ್ಯತ್ಯಯದಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಕೊರತೆ ನಡುವೆ ವಿದ್ಯುತ್​ ಅಭಾವದಿಂದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ದೂರಿದರು. ಡಿ&ಕ್ರಾಸ್​ ನಿಂದ ಸರಬರಾಜು ಆಗುವ ತೂಬಗೆರೆ, ದೊಡ್ಡಬೆಳವಂಗಲ, ಕಸಬಾ ಹೋಬಳಿಗಳಲ್ಲಿನ ವಿದ್ಯುತ್​ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್​ ಮಾತನಾಡಿ, ಎರಡು&ಮೂರು ಬಾರಿ ವಿದ್ಯುತ್​ ಕಡಿತವಾಗುತ್ತಿದೆ. ಇದರಿಂದ ಸಾಕಷ್ಟು ಪಂಪ್​ಸೆಟ್​ಗಳು ಸುಟ್ಟು ಹೋಗುತ್ತಿವೆ. ಮೊದಲೇ ವಿದ್ಯುತ್​ ಕಡಿತದಿಂದ ತೊಂದರೆ ಅನುಭವಿಸುತ್ತಿರುವ ರೈತರು, ಪಂಪ್​ಸೆಟ್​ ದುರಸ್ಥಿಗೂ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ರೈತರ ಮನವಿ ಸ್ವೀಕರಿಸಿ ಮಾತನಾಡಿದ ಕೆಪಿಟಿಸಿಎಲ್​ ತಾಲೂಕು ಎಇಇ ಲಕ್ಷ$್ಮಣ್​, 20 ದಿನಗಳಿಂದ ಡಿ.ಕ್ರಾಸ್​ನಲ್ಲಿನ ಟ್ರಾನ್ಸ್​ಾರ್ಮರ್​ ದುರಸ್ತಿಯಾಗಿದೆ. ಇದಕ್ಕೆ ಸಂಬಂಧಿಸಿದ ಉಪಕರಣಗಳನ್ನ ಎಲೆಕ್ಟ್ರಾನಿಕ್​ ಸಿಟಿಯಿಂದ ತರಿಸಲಾಗುತ್ತಿದೆ. ಹಾಗಾಗಿ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮುಂದಿನ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.