ಜಿಲ್ಲೆ

ಸಮರ್ಪಕ ವಿದ್ಯುತ್​ ಪೂರೈಕೆಗೆ ಆಗ್ರಹ

ಖಾನಾಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಅನುಕೂಲತೆಗಾಗಿ ಕನಿಷ್ಠ 12 ಗಂಟೆ ತ್ರೀೆಸ್​ ವಿದ್ಯುತ್​ ಪೂರೈಸಬೇಕು ಎಂದು ನೇಗಿಲ ಯೋಗಿ ರೈತ ಸಂದ ತಾಲೂಕಾಧ್ಯ ರವಿ ಪಾಟೀಲ ಆಗ್ರಹಿಸಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಬೆಕವಾಡ, ಜುಜವಾಡ, ಖೆರ್ವಾಡ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್​ ಸರಬರಾಜು ವ್ಯವಸ್ಥೆ ಸುಧಾರಿಸಬೇಕು. ಅಲ್ಲದೆ, ರೈತರು ಕೃಷಿ ಎಸ್ಟೇಟ್​ಗಳ ಪ್ರದೇಶಗಳಲ್ಲಿ ವಾಸಿಸುತ್ತಾರೆ. ರಾತ್ರಿ ಬೆಳೆಗಳಿಗೆ ನೀರುಣಿಸುವ ವೇಳೆ ರೈತರಿಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಿರುತ್ತದೆ. ಹೀಗಾಗಿ, ಸಂಜೆ 6ರಿಂದ ಬೆಳಗ್ಗೆ ವರೆಗೆ ಏಕ&ಹಂತದ ವಿದ್ಯುತ್​ ಸರಬರಾಜು ಮುಂದುವರಿಸಬೇಕು ಎಂದು

ಮನವಿ ಮಾಡಿದರು.

ತಹಸೀಲ್ದಾರ್​ ದುಂಡಪ್ಪ ಕೋಮಾರ ಮಾತನಾಡಿ, ರೈತರಿಗೆ ಸಮರ್ಪಕವಾಗಿ ವಿದ್ಯುತ್​ ಪೂರೈಸುವಂತೆ ಸೂಚಿಸಿದರು. ಭರಮಾನಿ ಪಾಟೀಲ, ಬೆಕ್ವಾಡ, ಜುಂಜವಾಡ ಹಾಗೂ ಕತ್ಗಲಿ ರೈತರು ಪಾಲ್ಗೊಂಡಿದ್ದರು.