filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ಸಮರ್ಪಕ ವಿದ್ಯುತ್​ ಪೂರೈಕೆಗೆ ಆಗ್ರಹ

ಎಂ.ಎಸ್​.ಹಿರೇಮಠ ಬೆಳಗಾವಿ

ಕೋ.ಶಿವಾಪುರ: ಪಂಪ್​ಸೆಟ್​ ಹಾಗೂ ಮನೆಗಳಿಗೆ ಸಮರ್ಪಕ ವಿದ್ಯುತ್​ ಪೂರೈಸುವಂತೆ ಆಗ್ರಹಿಸಿ ರೈತರು ಗ್ರಾಮದಲ್ಲಿ ಹೆಸ್ಕಾಂ ಶಾಖಾಧಿಕಾರಿ ಆಶ್​ೀ ನಧಾಪ್​ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕೃಷಿಕ ಸಮಾಜದ ಯುವ ಟಕದ ಅಧ್ಯ ಮಹಾಂತೇಶ ತೋಟಗಿ ಮಾತನಾಡಿ, ಕೋಟೂರ ವಿದ್ಯುತ್​ ಸರಬರಾಜು ಕೇಂದ್ರ ರೈತರ ಪಂಪ್​ಸೆಟ್​ ಹಾಗೂ ಮನೆಗಳಿಗೆ ವ್ಯವಸ್ಥಿತವಾಗಿ ವಿದ್ಯುತ್​ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈಗಿರುವ 33 ಕೆವಿ ವಿದ್ಯುತ್​ ಸರಬರಾಜು ಕೇಂದ್ರವನ್ನು 110 ಕೆವಿಗೆ ಹೆಚ್ಚಿಸಬೇಕು. ಪದೇಪದೆ ವಿದ್ಯುತ್​ ವ್ಯತ್ಯಯದಿಂದ ಪಂಪ್​ಸೆಟ್​ಗಳಿಂದ ನೀರು ಸರಬರಾಜು ಆಗದೆ ರೈತರು ನಾಟಿ ಮಾಡಿದ ಬೆಳೆಗಳು ಒಣಗುತ್ತಿವೆ. ಹೀಗಾಗಿ, ಬೀಜೋಪಚಾರದ ಖರ್ಚು ಕೈ ಸೇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ರೈತರು ಗ್ರಾಮ ಪಂಚಾಯತಿ ಮುಂಭಾಗದ ವೃತ್ತದಲ್ಲಿ ಪ್ರತಿಭಟನೆ ನಡಸಿದರು.

ಸ್ಥಳಕ್ಕೆ ಆಗಮಿಸಿದ ಕೋಟೂರ ಹೆಸ್ಕಾಂ ಶಾಖಾಧಿಕಾರಿ ಆಶ್​ೀ ನಧಾಪ್​ ರೈತರ ಮನವಿ ಸ್ವೀಕರಿಸಿ, 110 ಕೆವಿ ಹೆಸ್ಕಾಂ ವಿದ್ಯುತ್​ ಸರಬರಾಜು ಕೇಂದ್ರ ನಿರ್ಮಾಣ ಹಂತದಲ್ಲಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಮಡಿವಾಳಪ್ಪ ಗಡ್ಡಿ, ಶಿವು ಕಟ್ಟಿಮನಿ, ರಮೇಶ ಗಡ್ಡಿ, ಯಲ್ಲಪ್ಪ ಗೋಸಬಾಳ, ಸಂಗಪ್ಪ ಸೋಗಲದ, ರಾಯಪ್ಪ ಚಂದರಗಿ ಪರಮೇಶ ಚಂದರಗಿ ಇತರರಿದ್ದರು.