ತಲ್ಲೂರ: ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗ್ರಾಪಂ ವ್ಯಾಪ್ತಿಯ ಜೀವಾಪುರ ಕ್ರಾಸ್ನಲ್ಲಿ ಯರಗಟ್ಟಿ&ಮುನವಳ್ಳಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಕಲ್ಮೇಶ ಬಾಲರಡ್ಡಿ ಮಾತನಾಡಿ, ಜೀವಾಪುರ ಗ್ರಾಮದ ವಿದ್ಯಾರ್ಥಿಗಳು ಶಿಣ ಅರಸಿ ನಿತ್ಯ ಯರಗಟ್ಟಿ, ಮುನವಳ್ಳಿ, ಸವದತ್ತಿ, ಧಾರವಾಡ, ಗೋಕಾಕ, ಬೆಲಹೊಂಗಲದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ತರಗತಿಗೆ ಹಾಜರಾಗಲು, ಮರಳಿ ಉರಿಗೆ ಬರಲು ತೊಂದರೆಯಾಗುತ್ತಿದೆ ಎಂದು ಸಿಟ್ಟು ಹೊರಹಾಕಿದರು. ಒಂದು ತಾಸಿಗೂ ಹೆಚ್ಚು ಕಾಲ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಯರಗಟ್ಟಿ ಬಸ್ ಟಕದ ಅಧಿಕಾರಿ ಎನ್.ಐ. ಬಡಿಗೇರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, 2ದಿನದಲ್ಲಿ ಬಸ್ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಮುಖಂಡರಾದ ವೆಂಕಪ್ಪ ಅರಳಿಕಟ್ಟಿ, ಕಷ್ಣ ಅರೆಬೆಂಚಿ, ಪುಟ್ಟು ಅರಳಿಕಟ್ಟಿ, ಬಸವರಾಜ ಕಮಕೇರಿ, ಗಿರೀಶ ಯರಡ್ಡಿ, ಬಸು ತಳವಾರ, ಶೆಟ್ಟೆಪ್ಪ ಮಾದರ, ರಮೇಶ ಅರಳಿಕಟ್ಟಿ, ಬಸಪ್ಪ ಅರಳಿಕಟ್ಟಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.