ಬಸವನಬಾಗೇವಾಡಿ ತಾಲೂಕಿನ ಸೋಲವಾಡಗಿ ಗ್ರಾಮದ ಮಹಿಳೆಯರು ಹಾಗೂ ಗ್ರಾ.ಪಂ ಸದಸ್ಯರು ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಭೀಮಣ್ಣ ಕೋಲಕಾರ, ಗುರು ಗುಡಿಮನಿ, ಯಮನೂರಿ ಚಲವಾದಿ, ಸಿದ್ಧಮ್ಮ ಹೊನ್ನಳ್ಳಿ, ದುಂಡಮ್ಮ ನಾಟೀಕಾರ, ಎಂಕುಬಾಯಿ ತುಂಬಗಿ, ನಿಂಗವ್ವ ಗುಂದಗಿ, ಭಾಗ್ಯ ಆಲೂರ, ಈರಮ್ಮ ಮೂರಮಟ್ಟಿ ಇತರರಿದ್ದಾರೆ. 
ಜಿಲ್ಲೆ

ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹ

ಗಿರೀಶ ಸಗರ

ಬಸವನಬಾಗೇವಾಡಿ: ತಾಲೂಕಿನ ಸೋಲವಾಡಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಧೋಬಿ ಘಾಟ ದುರಸ್ಥಿ ಮಾಡದೆಯೇ ಹಾರಿಕೆ ಉತ್ತರ ನೀಡುತ್ತಿರುವ ಬ್ಯಾಕೋಡ ಪಂಚಾಯತಿ ಪಿಡಿಒ ಮೇಲೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಅವರಿಗೆ ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಕಳೆದ 40 ವರ್ಷಗಳಿಂದ ಇದ್ದ ಧೋಬಿ ಘಾಟನ್ನು ಒಡೆಯಲಾಗಿದ್ದು, ಅದನ್ನು ಸರಿಪಡಿಸಿದರೆ ಬಟ್ಟೆ ತೊಳೆಯಲು ಹಾಗೂ ದನ&ಕರುಗಳಿಗೆ ಅನುಕೂಲವಾಗುತ್ತದೆ. ಜತೆಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಪಿಡಿಒ ಅವರನ್ನು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅವರನ್ನು ಅಮಾನತುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಗ್ರಾ.ಪಂ. ಸದಸ್ಯರಾದ ಭೀಮಣ್ಣ ಕೋಲಕಾರ, ಗುರು ಗುಡಿಮನಿ, ಯಮನೂರಿ ಚಲವಾದಿ, ಸಿದ್ಧಮ್ಮ ಹೊನ್ನಳ್ಳಿ, ದುಂಡಮ್ಮ ನಾಟೀಕಾರ, ಎಂಕುಬಾಯಿ ತುಂಬಗಿ, ನಿಂಗವ್ವ ಗುಂದಗಿ, ಭಾಗ್ಯ ಆಲೂರ, ಈರಮ್ಮ ಮೂರಮಟ್ಟಿ, ಶಾಂತಾಬಾಯಿ ಪೂಜಾರಿ, ಜುಬೇದಾ ಮುಜಾವರ, ರೇಣುಕಾ ಮಟಿಹಾಳ, ಮಹಾದೇವಿ ಗುಂದಗಿ, ಹುಲಗೆಮ್ಮ ಹೊಲ್ದುರ, ಅನಸೂಯಾ ನಾಟೀಕಾರ, ಮುದಕಮ್ಮ ಮುತ್ತಗಿ, ಬಿಬಿಜಾನ ಇನಾಮದಾರ ಮತ್ತಿತರಿದ್ದರು.