ವಿಜಯಪುರ : ಕಲಬುರಗಿಯಲ್ಲಿ ಭಾನುವಾರ ನಡೆದ ನೀಟ್ ಪರೀೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ಸಂವಿಧಾನ ವಿರೋಧಿ ಕೃತ್ಯ. ತಣ ಅಧಿಕಾರಿ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ವಿಪ್ರ ಸಮಾಜದ ಮುಖಂಡ, ಮಂತ್ರಾಲಯ ರಾವೇಂದ್ರ ಸ್ವಾಮಿ ಮಠದ ವಿಚಾರಣಾಕರ್ತ ಗೋಪಾಲ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಬ್ರಾಹ್ಮಣರಿಗೆ ಜನಿವಾರ ಪವಿತ್ರ. ಧರ್ಮದ ಮೇಲೆ ಆಕ್ರಮಣ ಮಾಡಲು ಇವರಿಗೆ ಯಾರು ಅಧಿಕಾರ ಕೊಟ್ಟರು? ಎಂದು ಪ್ರಶ್ನಿಸಿ ಅವರಿಗೆ ಶಿೆ ಆಗಬೇಕು ಒತ್ತಾಯಿಸಿದ್ದಾರೆ. ಮುಂದೆ ಇಂತಹ ಟನೆಗಳು ಪುನರಾವರ್ತನೆ ಆಗಬಾರದು.
ಯಾವ ಕಾನೂನಿನಡಿ ವಿದ್ಯಾರ್ಥಿಯ ಜನಿವಾರ ತೆಗೆಸಿದರು ಎಂಬುದನ್ನು ಸ್ಪಷ್ಟಪಡಿಸುವ ಜತೆಗೆ ಪ್ರಕರಣದಲ್ಲಿ ಭಾಗಿಯಾದವರನ್ನು ಅಮಾನತುಗೊಳಿಸುವಂತೆ ಗೋಪಾಕ ನಾಯಕ ಮನವಿ ಮಾಡಿದ್ದಾರೆ.