ಜಿಲ್ಲೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ಪ್ರಶಾಂತ ಹೂಗಾರ

ತೆಲಸಂಗ: ಅಥಣಿ ತಾಲೂಕಿನಲ್ಲಿರುವ ವಿಶ್ವಕರ್ಮ ಸಮುದಾಯ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿ ತೆಲಸಂಗ ಹೋಬಳಿ ಘಟಕದ ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯದ ವತಿಯಿಂದ ಉಪ ತಹಸೀಲ್ದಾರ್ ಹರೀಶ ಕುಲಕರ್ಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

ಕುಶಲಕರ್ಮಿ ವೃತ್ತಿಯನ್ನೇ ನಂಬಿಕೊಂಡು ಬದುಕುವುದು ಕಷ್ಟವಾಗಿದೆ. ವಿಶ್ವಕರ್ಮ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥಣಿಯಲ್ಲಿ ವಿಶ್ವಕರ್ಮ ಹಾಸ್ಟೆಲ್ ಸ್ಥಾಪಿಸಬೇಕು. ತೆಲಸಂಗ ಹೋಬಳಿಯಲ್ಲಿ ಸಮುದಾಯದ ಸಾಮೂಹಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನ ನಿರ್ಮಿಸಲು ಮುಂಜೂರಾತಿ ನೀಡಬೇಕು. ಸಮುದಾಯದ ಜನರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.

ಕಾಳಪ್ಪ ಬಡಿಗೇರ, ಸಂತೋಷ ಬಡಿಗೇರ, ಸಂತೋಷ ಪತ್ತಾರ, ವಿನಾಯಕ ಬಡಿಗೇರ, ಮಂಜುನಾಥ ಬಡಿಗೇರ ಇತರರಿದ್ದರು.