ಹೊಳೆನರಸೀಪುರ: ಉಪ್ಪಾರ ಸಮುದಾಯದಕ್ಕೆ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ನಂಜುಂಡೇಗೌಡ ಮನವಿ ಮಾಡಿದರು.
ತಾಲೂಕು ಉಪ್ಪಾರ ಸಂಘದಿಂದ ಗುರುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಉಪ್ಪಾರರು ಕಳೆದ ಹತ್ತಾರು ದಶಕಗಳಿಂದ ಇಲ್ಲಿ ನೆಲೆಸಿದ್ದೇವೆ. ಹೂವು ಮಾರಿ ಗೌರವದ ಜೀವನ ನಡೆಸುತ್ತಿದ್ದೇವೆ. ನಮ್ಮ ಜನಾಂಗಕ್ಕೆ ಯಾವುದೇ ಪ್ರತಿನಿಧಿಗಳು ಸಮುದಾಯ ಭವನ ನೀಡಿಲ್ಲ. ಆದ್ದರಿಂದ ನಾವು ಹೂವು ಮಾರಾಟ ಮಾಡುವ ನಮ್ಮ ಮಾರುಕಟ್ಟೆಯಲ್ಲಿ ಪ್ರತಿವರ್ಷ ಭಗೀರಥ ಜಯಂತಿ ಆಚರಿಸುತ್ತಿದ್ದೇವೆ. ಇನ್ನಾದರೂ ಜನಪ್ರತಿನಿಧಿಗಳು ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂದು ಕೋರಿದರು.
ಉಪಾಧ್ಯಕ್ಷ ಕಿಟ್ಟಿ ಉಪ್ಪಾರ್, ಸುನೀಲ್, ನಾರಾಯಣ, ಪುರುಷೋತ್ತಮ, ಕೃಷ್ಣಪ್ಪ, ರವಿ, ಚಂದ್ರು, ನರೇಂದ್ರ, ಬಾಬು, ನಾರಾಯಣಶೆಟ್ಟಿ, ಗಣೇಶ ಭಾಗವಹಿಸಿದ್ದರು.