ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಬಸವಂತಪ್ಪ ತಳವಾರ, ಸಂತೋಷ ಕಡಿವಾಲ, ಬಸವರಾಜ ತಳವಾರ, ಶಿವಕುಮಾರ ತಳವಾರ ಇತರರಿದ್ದರು. 
ಜಿಲ್ಲೆ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಸೋಮನಾಥ ರೆಡ್ಡಿ

ರೋಣ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ರೋಣ ತಾಲೂಕು ವಾಲ್ಮೀಕಿ ಸಮಾಜದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಸವಂತಪ್ಪ ತಳವಾರ ಮಾತನಾಡಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ಮೇಲೆ ಕ್ರಮ ಕೈಗೊಳಬೇಕು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ನಿಗಮಕ್ಕೆ ಮರಳಿ ಹಣ ಕಟ್ಟಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸುಗಮವಾಗಿ ಸಾಗಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೋಣ ಪುರಸಭೆ ಸದಸ್ಯ ಸಂತೋಷ ಕಡಿವಾಲ, ಬಸವರಾಜ ತಳವಾರ, ಶಿವಕುಮಾರ ತಳವಾರ, ಹನಮಪ್ಪ ಕರಮುಡಿ, ಸಂತೋಷ ತಳವಾರ, ಶ್ರೀಕಾಂತ ಹೊಸೂರು, ಅಂದಪ್ಪ ಹೊಸಳ್ಳಿ, ಶರಣಪ್ಪ ತಳವಾರ, ರಂಗನಾಥ ಜಾಲಿಹಾಳ, ಸುನೀಲ ಕೊಣ್ಣೂರ, ಎಚ್.ಕೆ. ತಳವಾರ, ವಿ.ಎಸ್. ತಳವಾರ, ಹನಮಂತ ಬೇಡರ, ಆರ್.ವೈ. ತಳವಾರ, ಆರ್.ವಿ. ತಳವಾರ, ಎಂ.ಸಿ. ತಳವಾರ, ಯಮನಪ್ಪ ತಳವಾರ ಇತರರು ಇದ್ದರು.